ಪೂಂಚ್ ಜಿಲ್ಲೆಗಳ ಗಡಿಯಲ್ಲಿ ಪಾಕ್‍ನಿಂದ ಮತ್ತೆ ಅಪ್ರಚೋದಿತ ದಾಳಿ : ಓರ್ವ ಸಾವು, ಕೆಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Border-Firing--01

ಜಮ್ಮು, ಜೂ.1-ಭಾರತೀಯ ಸೇನಾ ಪಡೆಗಳಿಗೆ ಒಂದೆಡೆ ಭಯೋತ್ಪಾದಕರ ಹಾವಳಿ ಇನ್ನೊಂದೆಡೆ ಪಾಕಿಸ್ತಾನಿ ಯೋಧರ ಅಪ್ರಚೋದಿತ ದಾಳಿಯ ಸವಾಲು ಎದುರಾಗಿದೆ. ಕಳೆದೊಂದು ತಿಂಗಳಿನಿಂದ ಕಾಶ್ಮೀರಲ್ಲಿ ಉಗ್ರರ ಒಳನುಸುಳುವಿಕೆ ಮತ್ತು ಪಾಕ್ ಸೇನಾ ಪಡೆಯ ಯುದ್ಧ ವಿರಾಮ ಉಲ್ಲಂಘನೆ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗುತ್ತಿವೆ.  ಜಮ್ಮು ಮತ್ತು ಕಾಶ್ಮೀರದ ರಜೌರಿ ಮತ್ತು ಪೂಂಚ್ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಇಂದು ಬೆಳಗ್ಗೆ 7.30ರಲ್ಲಿ ಸೇನಾ ಮುಂಚೂಣಿ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಸೇನಾ ಪಡೆಗಳು ಕದನವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದೆ.



ಈ ಆಕ್ರಮಣದಲ್ಲಿ ಜನರಲ್ ಎಂಜಿನಿಯರಿಂಗ್ ರಿಸರ್ವ್ ಫೋರ್ಸ್ (ಜಿಆರ್‍ಇಎಫ್) ಪಡೆಯ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟು, ಚಾಲಕ ಸೇರಿದಂತೆ ಕೆಲವರು ಗಾಯಗೊಂಡಿದ್ದಾರೆ. ಪಾಕ್ ರೇಂಜರ್‍ಗಳ ದಾಳಿಗೆ ಭಾರತೀಯ ಯೋಧರೂ ದಿಟ್ಟ ಪ್ರತ್ಯುತ್ತರ ನೀಡಿದ್ದು, ಗಡಿಯಲ್ಲಿ ಕೆಲಕಾಲ ಗುಂಡಿನ ಚಕಮಕಿ ಮುಂದುವರಿಯಿತು ಎಂದು ರಕ್ಷಣಾ ಇಲಾಖೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಾನಿಷ್ ಮೆಹ್ತಾ ತಿಳಿಸಿದ್ದಾರೆ.   ಮೇ 17ರಂದು ಪಾಕಿಸ್ತಾನಿ ಸೇನೆ ರಜೌರಿ ಜಿಲ್ಲೆಯ ಬಾಲಕೋಟ್ ಸೆಕ್ಟರ್‍ನ ಎಲ್‍ಒಸಿ ಬಳಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin