ಪೂರ್ವ ಸಿರಿಯಾದಲ್ಲಿ ಐಎಸ್ ಉಗ್ರರಿಂದ 33 ಯುವಕರ ಶಿರಚ್ಛೇದ

ಈ ಸುದ್ದಿಯನ್ನು ಶೇರ್ ಮಾಡಿ

ISIS-Headcut

ನ್ಯೂಯಾರ್ಕ್, ಏ.7-ವಿಶ್ವದ ಅತ್ಯಂತ ಕ್ರೂರ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಮತ್ತೆ ಭೀಭಿತ್ಸ ಕ್ರೌರ್ಯದ ನರಮೇಧ ನಡೆಸಿದ್ದಾರೆ. ಪೂರ್ವ ಸಿರಿಯಾದಲ್ಲಿ ಭಯೋತ್ಪಾದಕರು 33 ಜನರ ಶಿರಚ್ಛೇದ ಮಾಡಿದ್ದಾರೆ. ಅಲ್ಲದೇ ಇರಾಕ್‍ನಲ್ಲಿ 24 ಮಂದಿ ಐಎಸ್ ಉಗ್ರರ ಅಟ್ಟಹಾಸಕ್ಕೆ ಅಸುನೀಗಿದ್ದಾರೆ.  ಸಿರಿಯಾದ ದೀರ್ ಎಜ್ಜೋರ್ ಪಟ್ಟಣದ ಬಳಿ ಅಲ್-ಮಯದಾನಿ ಮರಭೂಮಿಯಲ್ಲಿ ಈ 33 ಯುವಕರನ್ನು ಐಎಸ್ ಬಂದೂಕುದಾರಿಗಳು ಅತ್ಯಂತ ಹರಿತವಾದ ಆಯುಧದಿಂದ ಕತ್ತು ಕತ್ತರಿಸಿ ಕೊಂದಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರು ಇತ್ತೀಚೆಗೆ ನಡೆಸಿದ ಅತಿ ದೊಡ್ಡ ನರಮೇಧ ಇದಾಗಿದೆ ಎಂದು ಸಿಎನ್‍ಎನ್ ವರದಿಯೊಂದು ತಿಳಿಸಿದೆ. ಮೃತಪಟ್ಟವರೆಲ್ಲರೂ 18 ರಿಂದ 25 ವರ್ಷ ವಯೋಮಾನದವರು.

ಈ ಮಧ್ಯೆ, ಇರಾಕ್‍ನ ತಿಕ್ರಿತ್‍ನಲ್ಲಿ ದಾಳಿ ನಡೆಸಿದ ಉಗ್ರಗಾಮಿಗಳು 23 ಮಂದಿಯನ್ನು ನಿರ್ದಯವಾಗಿ ಹೊಸಕಿ ಹಾಕಿದ್ದಾರೆ. ಬಂಡುಕೋರರು ನಡೆಸಿದ ಭೀಕರ ದಾಳಿಯಲ್ಲಿ ಈ ಪ್ರಾಂತ್ಯದಲ್ಲಿ ಅಪಾರ ಸಾವು-ನೋವು ಸಂಭವಿಸಿದೆ ಎಂದು ವರದಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin