ಪೆಟ್ರೋಲ್‍ಗೆ ಕಲುಷಿತನೀರು ಮಿಕ್ಸ್ ಮಾಡುತ್ತಿದ್ದ ಬಂಕ್ ಮುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

petrol

ತುಮಕೂರು,ಸೆ.10-ವ್ಯಾಪಾರಸ್ಥರು ಹಣಕ್ಕಾಗಿ ಏನೇನೊ ಕಲಬೆರಕೆ ಮಾಡುತ್ತಾರೆ. ಹಾಲಿಗೆ ನೀರು ಹಾಕ್ತಾರೆ… ಪರವಾಗಿಲ್ಲ ಕುಡಿಬೋದು… ಆದರೆ ಪೆಟ್ರೋಲ್‍ಗೆ ನೀರು ಹಾಕಿದ್ರೆ ಗಾಡಿ ಓಡಾದಾದ್ರೂ ಹೇಗೆ… ಖಂಡಿತ ಸೀಜ್ ಆಗುತ್ತದೆ. ನಗರದ ಹೊರವಲಯದ ಹಿರೇಹಳ್ಳಿಯಲ್ಲಿರುವ ಪೆಟ್ರೋಲ್ ಬಂಕ್‍ವೊಂದರಲ್ಲಿ ಪೆಟ್ರೋಲ್‍ಗೆ ಕಲುಷಿತ ನೀರು ಬೆರಸಿ ಮಾರಾಟ ಮಾಡುತ್ತಿದ್ದರು. ಇದರಿಂದ ಕೆಲವು ಗಾಡಿಗಳು ಇಂಜಿನ್ ಸೀಜ್ ಆಗಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿದ ವಾಹನ ಮಾಲೀಕರು ಬಾಟಲ್‍ವೊಂದಕ್ಕೆ ಬಂಕ್‍ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ನೋಡಿದಾಗ ಪೆಟ್ರೋಲ್‍ಗೆ ನೀರು ಕಲಬೆರಕೆಯಾಗಿರುವುದು ಬೆಳಕಿಗೆ ಬಂದಿದೆ.
ಇದರಿಂದ ರೊಚ್ಚಿಗೆದ್ದ ವಾಹನ ಮಾಲೀಕರು ಕೋಕೋ ಪೆಟ್ರೋಲ್ ಬಂಕ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಒಂದು ಲೀಟರ್ ಪೆಟ್ರೋಲ್‍ಗೆ 250 ಎಂಎಲ್ ನೀರು ಕಲಬೆರಕೆ ಮಾಡುತ್ತಿದ್ದರು. ಅದೇನು ಒಳ್ಳೆ ನೀರು ಅಂತೀರಾ.. ಖಂಡಿತ ಇಲ್ಲ. ಅದು ಕಲುಷಿತ ನೀರು.
ಒಳ್ಳೆ ನೀರು ಕುಡಿದು ಮಾನವರು ಬದುಕುವುದೇ ಕಷ್ಟ. ಇನ್ನು ವಾಹನಗಳಿಗೆ ಒಂದು ಹನಿ ನೀರು ಬಿದ್ದರೂ ಒಂದೆಜ್ಜೆ ಮುಂದೆ ಉರುಳಲ್ಲ. ಇದರಿಂದ ಮಾಲೀಕನ ಜೇಬಿಗೂ ಕತ್ತರಿ. ಇಂತಹ ದಂಧೆಯನ್ನು ಹಲವಾರು ದಿನಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪೆಟ್ರೋಲ್ ಹಾಕಿಸಿಕೊಳ್ಳುವವರು ವಾಸನೆ ಮತ್ತು ರುಚಿ ನೋಡುತ್ತಾರಾ… ಕಲಬೆರಕೆ ಇದೆಯೇ ಎನ್ನುವುದಕ್ಕೆ ಏನ್ ಹಾಕಿದ್ರೂ ಹಾಕಿಸ್ಕೊಂಡು ಹೋಗ್ತಾರೆ ಎಂಬುದೇ ಪೆಟ್ರೋಲ್ ಮಾಲೀಕರ ಹಗಲಲ್ಲೇ ಲೂಟಿ ಮಾಡುವ ತಂತ್ರ ಇರಬಹುದು. ಪೆಟ್ರೋಲ್‍ನಲ್ಲಿ ನೀರು ಕಲಬೆರಕೆಯಾಗಿರುವ ವಿಷಯ ಗೊತ್ತಾಗುತ್ತಿದ್ದಂತೆ ನೂರಾರು ಸಾರ್ವಜನಿಕರು, ವಾಹನ ಮಾಲೀಕರು ಕೋಕೋ ಪೆಟ್ರೋಲ್ ಬಂಕ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದ ಕೂಡಲೇ ಕ್ಯಾತಸಂದ್ರ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin