ಪೆಟ್ರೋಲ್-ಡೀಸೆಲ್‍ಗೆ ಸೀಮೆಎಣ್ಣೆ ಬೆರಕೆ ಖಂಡಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

tumakuru-petrol
ತುಮಕೂರು, ಮೇ 3– ಪೆಟ್ರೋಲ್-ಡೀಸೆಲ್‍ಗೆ ಸೀಮೆಎಣ್ಣೆ ಬೆರೆಸಿ ಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನೂರಾರು ಮಂದಿ ಇಂದು ನಗರದ ಹಲೆಕಾರ್ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.ನಗರದ ಬಾರ್‍ಲೈನ್ ರಸ್ತೆಯಲ್ಲಿರುವ ಎಚ್‍ಪಿ ಕಂಪೆನಿಗೆ ಸೇರಿದ ಪೆಟ್ರೋಲ್‍ಬಂಕ್‍ನಲ್ಲಿ ಮಾರುತಿ ಶಿಫ್ಟ್ ಹಾಗೂ ಮತ್ತೊಂದು ಕಾರ್‍ಗೆ ಡೀಸೆಲ್ ಹಾಕಿಸಿಕೊಂಡಾಗ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಗ್ಯಾರೇಜ್‍ಗೆ ಹೋಗಿ ತಪಾಸಣೆ ನಡೆಸಿದಾಗ ಡೀಸೆಲ್‍ಗೆ ಸೀಮೆಎಣ್ಣೆ ಬೆರೆತಿದೆ ಎಂದು ತಿಳಿಸಿದ್ದರು.ಇದರಿಂದ ಕುಪಿತಗೊಂಡ ಕಾರಿನ ಮಾಲೀಕರು ಹಾಗೂ ಚಾಲಕರು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಬಂಕ್‍ಗೆ ಮುತ್ತಿಗೆ ಹಾಕಿ ಬಂಕ್ ಮಾಲೀಕ ಹಾಗೂ ಮ್ಯಾನೇಜರ್‍ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಅಷ್ಟರಲ್ಲಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಕಾರಿನ ಮಾಲೀಕರು ನಗರ ಠಾಣೆಗೆ ದೂರು ನೀಡಿದರು.

ದೂರಿನನ್ವಯ ನಗರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಉಮಾಶಂಕರ್, ಇನ್ಸ್‍ಪೆಕ್ಟರ್ ಗಂಗಲಿಂಗಯ್ಯ, ತಹಸೀಲ್ದಾರ್ ರಂಗೇಗೌಡ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂತೇಗೌಡ, ತಾಲೂಕು ಆಹಾರ ನಿರೀಕ್ಷಕರು ಮತ್ತಿತರರು ಆಗಮಿಸಿ ಪೆಟ್ರೋಲ್ ಮತ್ತು ಡೀಸೆಲ್‍ನ ಸ್ಯಾಂಪಲ್ ತೆಗೆದುಕೊಂಡು ಲ್ಯಾಬ್‍ಗೆ ಕಳುಹಿಸಿದರು.ಈ ಸಂದರ್ಭದಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ಸ್ಥಗಿತಗೊಳಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin