ಪೆಟ್ರೋಲ್ ಬಂಕ್‍ಗಳಲ್ಲಿ 500/1000 ರೂ. ನೋಟುಗಳನ್ನು ತಿರಸ್ಕರಿಸಿದರೆ ಲೈಸೆನ್ಸ್ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

Petrol-Bunk

ನವದೆಹಲಿ,ನ.9– ಸರ್ಕಾರದ ಆದೇಶದಂತೆ ನವೆಂಬರ್ 11ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಿತ 500 ಮತ್ತು 1000 ರೂ. ನೋಟುಗಳನ್ನು ತಿರಸ್ಕರಿಸಿದರೆ ಅಂತಹ ಪೆಟ್ರೋಲ್ ಬಂಕ್‍ಗಳ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕೆಲವು ಪೆಟ್ರೋಲ್ ಬಂಕ್‍ಗಳಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿರುವ ಫ್ಲಾಜಾಗಳಲ್ಲಿ ಈ ನೋಟುಗಳನ್ನು ಸ್ವೀಕರಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಒಂದು ವೇಳೆ ಇದು ನಿಜವಾದರೆ ಅಂತಹ ಬಂಕ್‍ಗಳ ಪರವಾನಗಿಗಳನ್ನು ಯಾವುದೇ ಮುಲಾಜಿಲ್ಲದೆ ರದ್ದುಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ನಿನ್ನೆ ರಾತ್ರಿ ಪ್ರಧಾನಿ ಮೋದಿಯವರು ವಿದ್ಯುನ್ಮಾನ ಮಾಧ್ಯಮಗಳಲ್ಲಿ ತುರ್ತು ಮಾತನಾಡಿ, 500 ಮತ್ತು 1000 ರೂ. ನೋಟಗಳ ಚಲಾವಣೆಯನ್ನು ನಿನ್ನೆ ಮಧ್ಯರಾತ್ರಿಯಿಂದಲೇ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದ ನಂತರ ಸಾರ್ವಜನಿಕರು ಪೆಟ್ರೋಲ್ ಬಂಕ್‍ಗಳು ಮತ್ತು ಎಟಿಎಂಗಳಿಗೆ ಮುಗಿಬಿದ್ದರು.  ಈ ಹಿನ್ನೆಲೆಯಲ್ಲಿ ಕೆಲ ಬಂಕ್‍ಗಳಲ್ಲಿ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದರು ಎಂದು ಹೇಳಲಾಗಿದೆ. ಸಾರ್ವಜನಿಕರಿಂದ ಈ ದೂರುಗಳು ಕೇಳಿಬಂದಾಗ ಜನರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ ಬಂಕ್‍ಗಳಿಗೆ ಈ ಸೂಚನೆ ನೀಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin