ಪೇಟಿಎಂಗೆ ಪೈಪೋಟಿ ನೀಡಲು ಬರುತ್ತಿದೆ ಆಧಾರ್‌ ಪೇಮೆಂಟ್‌ ಆ್ಯಪ್‌ ..!

ಈ ಸುದ್ದಿಯನ್ನು ಶೇರ್ ಮಾಡಿ

Adhar-01

ನವದೆಹಲಿ. ಡಿ-24: ಕೇಂದ್ರ ಸರ್ಕಾರದ ಬಹು ಆಕಾಂಕ್ಷಿತ ಡಿಜಿಟಲ್ ಇಂಡಿಯಾದ ಭಾಗವಾದ ಆಧಾರ್ ಪೇಮೆಂಟ್ ಅಪ್ಲಿಕ್ಷೇನ್ಅನ್ನು ನಾಳೆ ಬಿಡುಗಡೆ ಮಾಡುತ್ತಿದೆ. ಈ ಮೂಲಕ ನೀವು ಇನ್ನುಮುಂದೆ ಯಾವುದೇ ಡೆಬಿಟ್ ಕಾರ್ಡ್ ಅಥವಾ ಕೆಡಿತ್ ಕಾರ್ಡ್ ಇಲ್ಲದೆ ವ್ಯವಹಾರ ಮಾಡಬಹುದು. ನಿಮಗೆ ನಿಮ್ಮ ಆಧಾರ್ ಸಂಖ್ಯೆಯೊಂದು ನೆನಪಿನಲ್ಲಿದ್ದರೆ ಸಾಕು ಎಲ್ಲಿಬೇಕಾದರೂ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.  ಐಡಿಎಫ್ ಸಿ ಬ್ಯಾಂಕ್‌ ಮತ್ತು ಯುಐಡಿಎಐ (ಆಧಾರ್‌) ಜತೆಗೂಡಿ ಸಿದ್ಧಪಡಿಸಿರುವ, ಸರಳವಾಗಿರುವ ಈ ಆ್ಯಪನ್ನು ವ್ಯಾಪಾರಿಗಳು ತಮ್ಮ ಆಂಡ್ರಾಯ್ಡ ಸ್ಮಾರ್ಟ್‌ ಫೋನ್‌ಗಳಿಗೆ ಡೌನ್‌ ಲೋಡ್‌ ಮಾಡಿಕೊಳ್ಳಬೇಕು. ಇದಕ್ಕೆ ಕೇವಲ 2,000 ರೂ. ಬೆಲೆಗೆ ಲಭ್ಯವಿರುವ ಬೆರಳಚ್ಚು ಬಯೋಮೆಟ್ರಿಕ್‌ ಸಾಧನವನ್ನು ಜೋಡಿಸಿಕೊಳ್ಳಬೇಕು.

ಖರೀದಿದಾರ ಗ್ರಾಹಕರು ತಮ್ಮ ಆಧಾರ್‌ ಕಾರ್ಡ್‌ ನಂಬರ್ ನ್ನು ವ್ಯಾಪಾರಿಗೆ ಕೊಟ್ಟಾಗ ಅವರು ಅದನ್ನು ಆ್ಯಪ್‌ಗೆ ಫೀಡ್‌ ಮಾಡುತ್ತಾರೆ. ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಹೊಂದಿರುವ ಗ್ರಾಹಕರ ಬ್ಯಾಂಕ್‌ ಖಾತೆಯು ಈ ಪಾವತಿ ವ್ಯವಹಾರಕ್ಕೆ ಆ್ಯಪ್‌ ಮೂಲಕ ಒಳಪಡುತ್ತದೆ. ಆಗ ಗ್ರಾಹಕರು ತಮ್ಮ ಬೆರಳಚ್ಚನ್ನು ಬಯೋಮೆಟ್ರಿಕ್‌ ಸಾಧನದಲ್ಲಿ ದಾಖಲಿಸಬೇಕು. ಇದುವೇ ಪಾಸ್‌ವರ್ಡ್‌ ಆಗಿ ಕೆಲಸ ಮಾಡುತ್ತದೆ. ಆಗ ವ್ಯಾಪರಿಗೆ ಗ್ರಾಹಕರ ಬ್ಯಾಂಕ್‌ ಖಾತೆಯಿಂದ ಹಣ ಪಾವತಿಯಾಗುತ್ತದೆ.

ಈ ವ್ಯವಸ್ಥೆಯಲ್ಲಿ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಬಳಕೆಯಾಗುವುದಿಲ್ಲ. ಅವುಗಳ ಪಾಸ್‌ ವರ್ಡ್‌ ಸೋರಿ ಹೋಗುವ ಭಯವಿಲ್ಲ. ಮೇಲಾಗಿ ಈ ಬಗೆಯ ಕಾರ್ಡ್‌ ಬಳಕೆಗೆ ವೀಸಾ, ಮಾಸ್ಟರ್‌ ಕಾರ್ಡ್‌ ಸಂಸ್ಥೆಗಳಿಗೆ ಯಾವುದೇ ಶುಲ್ಕ ಪಾವತಿಯಾಗಬೇಕಾದ ಅಗತ್ಯವೂ ಇಲ್ಲ ಎಂದು ಯುಎಐಡಿಎಐ ಸಿಇಓ ಅಜಯ್‌ ಭೂಷಣ್‌ ತಿಳಿಸಿದ್ದಾರೆ.  ದೇಶದಲ್ಲಿ ಈಗಾಗಲೇ 40 ಕೋಟಿ ಆಧಾರ್‌ ಕಾರ್ಡ್‌ಗಳು ಬ್ಯಾಂಕ್‌ ಖಾತೆಯೊಂದಿಗೆ ಜೋಡಿಸಲ್ಪಟ್ಟಿವೆ. 2017ರ ಮಾರ್ಚ್‌ ಒಳಗೆ ಎಲ್ಲ ಆಧಾರ್‌ ಕಾರ್ಡ್‌ಗಳನ್ನು ಬ್ಯಾಂಕ್‌ ಖಾತೆಗೆ ಜೋಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಪೇಟಿಎಂಗೆ ಪೈಪೋಟಿ : 

ಈ ಅಪ್ಲಿಕೇಶನ್ ನನ್ನ ಡೆಬಿಟ್/ಕ್ರೆಡಿಟ್ ಕಾರ್ಡ್ಗಳಿಗೆ ಬದಲಾಗಿ ಅತ್ಯಂತ ಸುಲಭವಾಗಿ ಬಳಸಬಹುದಾಗಿದ್ದು, ನಗದು ರಹಿತ ವ್ಯವಹಾರ ಸುಗಮಗೊಳ್ಳಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪೇಟಿಎಂ ಸಮನಾಗಿ ಆಧಾರ್ ಪೇಮೆಂಟ್ ಆ್ಯಪ್ ಬಳಕೆಗೆ ಬರಲಿದೆ. ಆ್ಯಂಡ್ರಾಯ್ಡ್ ಫೋನ್ ಮೂಲಕ ಸುಲಭವಾಗಿ ನೂತನ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಜನಸಾಮಾನ್ಯರಿಗೆ ಸುಲಭವಾಗಿ ವ್ಯವಹಾರ ನಡೆಸಲು ಅನುಕೂಲವಾಗುವ ರೀತಿಯಲ್ಲಿ ಆ್ಯಪ್ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಯುಎಡಿಎಐ, ಭಾರತದ ರಾಷ್ಟ್ರೀಯ ಪಾವತಿ ಸಹಕಾರ ಸಂಘ ಮತ್ತು ಐಡಿಎಫ್ಸಿ ಬ್ಯಾಂಕ್ ಜತೆಯಾಗಿ ನೂತನ ಆ್ಯಪ್ ಅಭಿವೃದ್ಧಿ ಪಡಿಸಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin