ಪೇಪರ್ ಹಾಕುವ ಹುಡುಗರಿಗೆ ಬಟ್ಟೆ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

huliyaru

ಹುಳಿಯಾರು, ಸೆ.14- ಸೂರ್ಯ ಹುಟ್ಟುವ ಮುಂಚೆ ಮಳೆ ಚಳಿ ಲೆಕ್ಕಿಸದೆ ಊರಿನ ಮನೆಮನೆಗಳಿಗೆ ಸೈಕಲ್ ತುಳಿದು ಪತ್ರಿಕೆ ಹಾಕುವ ಶ್ರಮಜೀವಿಗಳಾದ ಹುಡುಗರಿಗೆ ಬಟ್ಟೆ ವಿತರಿಸುವ ಮೂಲಕ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.ಸಾಸಲು ಸತೀಶ್ ಅವರು ಹುಡುಗರು ಹಣ ಸಂಗ್ರಹಿಸಿ ಪ್ರೀತಿಯಿಂದ ಮಾಡಿಸಿದ್ದ ಕೇಕ್ ಕತ್ತರಿಸಿ ಅವರಿಂದ ಅಭಿನಂದನೆ ಸ್ವೀಕರಿಸಿ ಪರಸ್ಪರ ಕೇಕ್ ತಿನ್ನಿಸಿ ಮಕ್ಕಳೊಂದಿಗೆ ಮಕ್ಕಳಾಗಿ ತಮ್ಮ 35 ನೇ ಹುಟ್ಟುಹಬ್ಬವನ್ನು ಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿ ಪೇಪರ್ ಹಾಕುವ ಪ್ರವೃತ್ತಿ ಮಕ್ಕಳಿಗೆ ಸಮಯಪಾಲನೆ, ದುಡಿಯುವ ಚಲ, ಸಹಕಾರ ಮನೋಭಾವ ಕಲಿಸುತ್ತದೆ ಎಂದರು.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸಹ ಪತ್ರಿಕೆ ಹಾಕಿ ಶಿಕ್ಷಣ ಪೂರೈಸಿದವರು. ಆದರೆ ಅವರು ಮುಂದೆ ಖ್ಯಾತ ವಿಜ್ಞಾನಿಯಾದರು. ಹಾಗೆ ಪೇಪರ್ ಹಾಕುವ ಹುಡುಗರು ಭವಿಷ್ಯದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಮುಂದೆ ಸಾಗುವಂತೆ ಕಿವಿಮಾತು ಹೇಳಿದರು.ಬಗರ್ ಹುಕುಂ ಕಮಿಟಿ ಸದಸ್ಯ ಎಚ್.ಎಚ್.ಅಶೋಕ್, ತಾಪಂ ಮಾಜಿ ಸದಸ್ಯ ವೈ.ಆರ್.ಮಲ್ಲಿಕಾರ್ಜುನಯ್ಯ, ಗ್ರಾಪಂ ಸದಸ್ಯರಾದ ಪುಟ್ಟಿಬಾಯಿ, ಸಿದ್ಧಗಂಗಮ್ಮ, ಬಿಂಧುರಮೇಶ್, ಬಡ್ಡಿಪುಟ್ಟರಾಜು, ಎಚ್.ಆರ್.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin