ಪೈಪ್‍ಲೈನ್ ಜೋಡಿಸಿದ ವಾರ್ಡ್ ನಾಗರಿಕರು

ಈ ಸುದ್ದಿಯನ್ನು ಶೇರ್ ಮಾಡಿ

12

ಬೈಲಹೊಂಗಲ,ಮಾ.13- ಸರ್ಕಾರ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ಅನೇಕ ಕ್ರಮಗಳ ಜೊತೆಗೆ ಸಾಕಷ್ಟು ಹಣವನ್ನು ಬಿಡುಗಡೆಗೊಳಿಸಿದರು. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್¯ಕ್ಷದಿಂದ ಜನತೆ ವಂಚಿತರಾಗಿ ತಾವೆ ಸ್ವತಃ ಪೈಪ್‍ಲೈನ್ ದುರಸ್ತಿಯ ಕಾರ್ಯವನ್ನು ಕೈಗೊಂಡ ಘಟನೆ ಹೊಸೂರ ಗ್ರಾಮದ ಹೊಸ ಬಡಾವಣೆಯಲ್ಲಿ ನಡೆದಿದೆ.

ಘಟನೆ ವಿವರ;

ಗ್ರಾಮದ ಪ್ರೌಢ ಶಾಲೆಯ ಮುಂಭಾಗದ ಬಡಾವಣೆಯಲ್ಲಿ ಪೈಪ್‍ಲೈನ್ ಅಳವಡಿಸಿದರು ನೀರಿನ ಸರಬರಾಜು ಮಾತ್ರ ಸ್ಥಗಿತವಾಗಿ ವರ್ಷಗಳೇ ಸಂದಿವೆ. ಈ ವಿಷಯ ಕುರಿತು ಆ ಬಡಾವಣೆಯ ನಾಗರಿಕರು ಅನೇಕ ಸಾರಿ ಅಲ್ಲಿನ ಗ್ರಾಮ ಪಂಚಾಯತಿ ಕಛೇರಿಗೆ ಅಲೆದರು ಕೆಲಸ ಮಾತ್ರ ಕೈಗೂಡಲಿಲ್ಲ. ಪಂಚಾಯತಿಯ ಆಸ್ತಿಯನ್ನು ಸಾರ್ವಜನಿಕರು ಮುಟ್ಟಬಾರದೆಂಬ ಸದುದ್ದೇಶದಿಂದ ಪಿಡಿಓ ಮತ್ತು ಗ್ರಾಪಂ ಸದಸ್ಯರಿಗೆ ತಿಳಿಸಿದರು. ಹಾರಿಕೆ ಉತ್ತರ ನೀಡಿ ನಮ್ಮಲ್ಲಿ ನೆಲ ಅಗಿಯಲಿಕ್ಕೆ ಜನವಿಲ್ಲ ಆದ್ದರಿಂದ ನೀವೆ ಅಗಿಸಿ ಅದಕ್ಕೆ ಬೇಕಾದ ಸಮಗ್ರಿ ನಾವು ಕೊಡುತ್ತೆವೆ ಎಂದು ಹೇಳಿದ್ದಾರೆ. ಈ ವಿಷಯದಿಂದ ಬೆಸತ್ತ ನಾಗರಿಕರು ತಾವೆ ಸ್ವತಃ ಪೈಪ್‍ಲೈನ್ ಅಗೆದು ಬೇರೆ ಪೈಪ್‍ಲೈನ್ ಜೋಡಿಸಿಕೊಂಡು ತಮಗೆ ಬೇಕಾದ ನೀರಿನ ಅವಶ್ಯಕತೆ ಪೂರೈಸಿಕೊಂಡಿದ್ದಾರೆ.

ಗ್ರಾಮೀಣ ಅಭಿವೃದ್ದಿಗೆ ಪ್ರತಿ ಗ್ರಾಮ ಪಂಚಾಯತಿಗೆ ಕಾರ್ಯದರ್ಶಿ, ಪಿಡಿಓ ಮೇಲಾಗಿ ವಾರ್ಡಿಗೆ 3ರಿಂದ 4ಜನ ಗ್ರಾಪಂ ಸದಸ್ಯರಿದ್ದರು ಅತೀ ಸಣ್ಣ ಕೆಲಸಗಳನ್ನು ಮಾಡದ ಅವರ ವರ್ತನೆ ಗ್ರಾಮಸ್ಥರಲ್ಲಿ ಜಿಜ್ಞಾಸೆ  ಮುಡಿಸಿದೆ. ನರೇಗಾ ಯೋಜನೆಯಡಿ ನೂರಾರು ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಹಚ್ಚುವ ಗಾಪಂ ಸಿಬ್ಬಂದಿಗೆ ಒಂದಿಬ್ಬರು ಕೂಲಿ ಕಾರ್ಮಿಕರು ಸಿಗುವುದಿಲ್ಲ ಎಂದರೆ ಆಶ್ಚರ್ಯವಲ್ಲದೆ ಇನ್ನೇನು ಎಂಬ ಜಿಜ್ಞಾಸೆ  ಮೂಡಿದೆ. ನರೇಗಾ ಕಾರ್ಯದಲ್ಲಿ ಲಕ್ಷ, ಲಕ್ಷ, ಸಂಬಳ ತಗೆಯುವ ಅವರ ಕೆಲಸವನ್ನು ಪ್ರಶ್ನಿಸುವಂತಿದೆ ಎಂದು ಗ್ರಾಮಸ್ಥರಾದ ಮೋಹನ ವಕ್ಕುಂದ, ಅಜ್ಜಪ್ಪಾ ಸಂಗೋಳ್ಳಿ, ಈರಪ್ಪ ಬಾಗೇವಡಿ, ಉಮೇಶ ಸಂಗೋಳ್ಳಿ ಮಡಿವಾಳಪ್ಪ ಸಂಗೋಳ್ಳಿ, ಮಹಾದೇವಪ್ಪ ತಟ್ಟಿಮನಿ ಅಪಾದಿಸಿದ್ದಾರೆ. ಈ ಕುರಿತು ಮೆಲಾಧಿಕಾರಿಗಳು ಗ್ರಾಮ ಪಂಚಾಯತಿಯಲ್ಲಿ ನಡೆಯುವ ಪ್ರತಿಯೊಂದು ಯೋಜನೆಗಳ ಕಾಮಗಾರಿಗಳ ಮೇಲೆ ನಿಗಾವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin