ಪೈ.ಸಿದ್ದರಾಜು ಹುಟ್ಟುಹಬ್ಬಕ್ಕೆ ನಾಡ ಕುಸ್ತಿ ಪಂದ್ಯಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu

ನಂಜನಗೂಡು, ಫೆ.10- ಸಂಸ್ಕೃತಿ  ಕಲೆ, ಮತ್ತು ಕುಸ್ತಿಯ ತವರೂರಾಗಿರುವ ನಂಜನಗೂಡಿನಲ್ಲಿ ಕುಸ್ತಿ ಕಲಾ ಚಕ್ರವರ್ತಿಯಾದ ಪೈ, ಸಿದ್ದರಾಜುರವರ ಹುಟ್ಟುಹಬ್ಬದ ಪ್ರಯುಕ್ತ 30 ಜೊತೆ ನಾಡ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಮುಖಂಡ ಧನರಾಜ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೈ ಸಿದ್ದರಾಜು ಅವರು ನೂರಾರು ಯುವಕರನ್ನು ಕುಸ್ತಿಪಟುಗಳಾನ್ನಾಗಿ ಮಾಡಿರುವುದಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇವರ ಶಿಷ್ಯರಿದ್ದಾರೆ ಎಂದರು.ಹಾಗಾಗಿ ಅವರ ಹುಟ್ಟುಹಬ್ಬದಂದು ಅವರಿಗೆ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಿದ್ದು ಕ್ರೀಡಾ ಮತ್ತು ಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಬೇಕೆಂದು ಕೋರಿದರು. ಸಂತೋಷ್, ಕುಮಾರ್, ದೋರೆಸ್ವಾಮಿ, ಮಣಿ, ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin