ಪೊರ್ಕಿ ಹುಚ್ಚ ವೆಂಕಟ್ ಚಿತ್ರ ಬಿಡುಗಡೆಗೆ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

uccha-venkat
ಸದಾ ವಿವಾದಗಳಿಂದಲೇ ಸುದ್ದಿಮಾಡುತ್ತಿದ್ದ ವೆಂಕಟ್ ಅವರ ನಿರ್ದೇಶನ ಹಾಗೂ ನಟನೆಯಲ್ಲಿ ಮೂಡಿಬರುತ್ತಿರುವ ಮತ್ತೊಂದು ಚಿತ್ರ ಪೊರ್ಕಿ  ಹುಚ್ಚ ವೆಂಕಟ್ ಈಗಾಗಲೇ ಬಿಡುಗಡೆಗೆ ಸಿದ್ದವಾಗಿದ್ದು, ಮುಂದಿನವಾರ ಅಂದರೆ ಏಪ್ರಿಲ್ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅಂದು ತೆಲುಗಿನ ಅದ್ದೂರಿ ವೆಚ್ಚದ ಬಹುನಿರೀಕ್ಷಿತ ಚಿತ್ರ ಬಾಹುಬಲಿ-2 ರಿಲೀಸಾಗುತ್ತಿರುವುದರಿಂದ ಯಾವುದೇ ಕನ್ನಡ ಚಿತ್ರ ತೆರೆಕಾಣುತ್ತಿಲ್ಲ.ಆದರೆ ಕೆಚ್ಚೆದೆಯ ಹುಚ್ಚ ವೆಂಕಟ್ ತಮ್ಮ ಚಿತ್ರವನ್ನು ಬಾಹುಬಲಿ ಎದಿರೇ ಧೈರ್ಯದಿಂದ ರಿಲೀಸ್ ಮಾಡುತ್ತಿದ್ದಾರೆ. ತಮ್ಮ ಚಿತ್ರದ ಬಿಡುಗಡೆಯ ಸಂಬಂಧ ಮೊನ್ನೆ ವೆಂಕಟ್ ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು.
ಚಿತ್ರದ ಬಗ್ಗೆ ಮಾತನಾಡುತ್ತಾ ರಾಜಕೀಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಹುಚ್ಚ ವೆಂಕಟ್ ಒಳ್ಳೆ ಕೆಲಸ ಮಾಡಿದಾಗ ನಾನು ಬೆಂಬಲಿಸುತ್ತೇನೆ, ಕೆಟ್ಟ ಕೆಲಸ ಮಾಡಿದಾಗ ಅದನ್ನು ತಪ್ಪು ಎಂದು ತೋರಿಸುತ್ತೇನೆ, ಸಾಧ್ಯವಾದಷ್ಟು ಒಳ್ಳೆ ಕೆಲಸಗಳನ್ನೇ ಮಾಡಿರಿ ಎಂದು ರಾಜಕಾರಣಿಗಳಿಗೆ ಕಿವಿಮಾತು ಹೇಳಿದರು. ಪೊರ್ಕಿ ಹುಚ್ಚ ವೆಂಕಟ್ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ವೈದ್ಯರು, ವಕೀಲರು ಹಾಗೂ ಶಿಕ್ಷಕರು ಸಮಾಜದ ಪ್ರಮುಖ ಅಂಗವಾಗಿರುವಂತೆ ಮಾದ್ಯಮಗಳು ಕೂಡ ಸಮಾಜದಲ್ಲಿ  ಪ್ರಮುಖ ಪಾತ್ರವನ್ನು ವಹಿಸುತ್ತವೆ.ಯಾರು ಏನೇ ಒಳ್ಳೇದು, ಕೆಟ್ಟದ್ದು ಮಾಡಿದರೂ ಅದು ಜನರನ್ನು ತಲುಪುವುದು ಮಾಧ್ಯಮಗಳಿಂದ ಎಂದು ಹೇಳಿದರು.
ಇಂದು ಹುಚ್ಚು ವೆಂಕಟ್ ಸೇನೆ ಹುಟ್ಟಿದ ದಿನ. ಅಮೇರಿಕಾ, ಪ್ಯಾರೀಸ್, ಜರ್ಮನಿ, ಲಂಡನ್ ಮೊದಲಾದ ರಾಷ್ಟ್ರಗಳಲ್ಲಿ ಸೇನೆಯ ಶಾಖೆಯನ್ನು ತೆರೆಯಲಾಗಿದೆ. ಅಮಾಯಕರ ಹೋರಾಟ, ಹಸಿವನ್ನು ನೀಗಿಸುವ ಧ್ಯೇಯವನ್ನು ಸೇನೆಯು ಹೊಂದಿದೆ. ಎಲ್ಲಾ ಸದಸ್ಯರು ನಮ್ಮ ತತ್ವಗಳನ್ನು ಪಾಲಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಹುಚ್ಚ ವೆಂಕಟ್ ಸೇನೆಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಯೋಜನೆ ಇದೆ ಎಂದರು.
ಇನ್ನು ಈ ಚಿತ್ರದ ಕುರಿತು ಹೇಳುವುದಾದರೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಸೆನ್ಸಾರ್‍ನವರು ಮೂರು ಡೈಲಾಗ್‍ಗಳನ್ನು ಮ್ಯೂಟ್ ಮಾಡಿದ್ದಾರೆ. ನಾಯಕ ವಿಷ್ಣುವರ್ಧನ್ ಅಭಿಮಾನಿಯಾಗಿದ್ದರಿಂದ ಅವರ ಕೆಲವೊಂದು ಗುಣಗಳನ್ನು ಚಿತ್ರದಲ್ಲಿ ಬಳಸಲಾಗಿದೆ.
ಸಂದೇಶ, ಪ್ರೀತಿ, ತಾಯಿ ಸೆಂಟಿಮೆಂಟ್ ಇವೆಲ್ಲದರ ಜೊತೆಗೆ ರೈತರ ಸಮಸ್ಯೆಗಳಿಗೆ ಪರಿಹಾರ, ಅತ್ಯಾಚಾರಿಗೆ ಗಲ್ಲು ಶಿಕ್ಷೆಯಾಗಬೇಕು, ಐಟಂ ಹಾಡು ಬ್ಯಾನ್ ಮಾಡಿ ಎಂಬುದನ್ನು ದೃಶ್ಯಗಳ ಮೂಲಕ ತೋರಿಸಲಾಗಿದೆ. ನಾನು ಈವರೆಗೆ ನನ್‍ಮಗಂದ್, ನನ್ ಯಕಡಾ ಅಂತ ಏತಕ್ಕಾಗಿ ಮಾತನಾಡುತ್ತಿದ್ದೆ ಎಂಬ ಬಗ್ಗೆ ಉತ್ತರವನ್ನು ಸಿನಿಮಾದಲ್ಲಿ ಹೇಳಿದ್ದೇನೆ. ಸೌಮ್ಯ, ರಚನಾ ಚಿತ್ರದಲ್ಲಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ತಾಯಿಯಾಗಿ ಹಿರಿಯ ನಟಿ ಶೈಲಶ್ರೀ ಕಾಣಿಸಿ ಕೊಂಡಿದ್ದಾರೆ ಎಂದು ಹೇಳಿದರು. ಸೇನೆಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin