ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : 2.30 ಕೋಟಿ ಮೌಲ್ಯದ ಕಾರು ವಶ

ಈ ಸುದ್ದಿಯನ್ನು ಶೇರ್ ಮಾಡಿ

car

ಬೆಳಗಾವಿ,ಆ.29- ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಗರ ಅಪರಾಧ ತನಿಖಾ ದಳದ ಸಿಬ್ಬಂದಿಗಳು ಗೋವಾ ನೊಂದಣಿ ಸಂಖ್ಯೆ ಹೊಂದಿದ್ದ ಸೂಕ್ತ ದಾಖಲೆಗಳಿಲ್ಲದ 37 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಗರ ಪೊಲೀಸ್ ಆಯುಕ್ತ ಟಿ.ಜೆ.ಕೃಷ್ಣಭಟ್, ನಗರದ ಎಪಿಎಂಸಿ ಠಾಣೆ ವ್ಯಾಪ್ತಿಯ ಆಜಾಮ ನಗರ ಕ್ರಾಸ್ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇನ್ನೋವಾ ಕಾರನ್ನು ವಶಕ್ಕೆ ಪಡೆದು ಚಾಲಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗೋವಾದಿಂದ ಕಳವು ಮಾಡಿ ನಗರದ ಜನರಿಗೆ ಪುಸಲಾಯಿಸಿ ಮಾರಲಾಗುತ್ತಿತ್ತು ಎಂದು ತಿಳಿದುಬಂದಿದು, ತನಿಖೆ ಮುಂದುವರೆದಿದೆ ಎಂದರು. ಈ ಪ್ರಕರಣಕ್ಕೆ ಸಂಬಂಸಿದಂತೆ ರವಿವಾರಪೇಠಯ ಕಲ್ಮಠ ಗಲ್ಲಿಯ ನವೀಧ್ ನಜಫ್ ಅಲಿ ಖತೀಬ(39) ಹಾಗೂ ಮುದ್ದೇಬಿಹಾಳದ ಸದ್ಯ ಗೋವಾ ರಹವಾಸಿ ಪರಶು ರಾಮ ಮಾಂತಪ್ಪ ಕುಂಬಾರ ಎಂಬುವರನ್ನು ವಶಕ್ಕೆ ಪಡೆಯ ಲಾಗಿದೆ ಎಂದು ತಿಳಿಸಿದರು.

ಕದ್ದ ಕಾರುಗಳನ್ನು ಎರಡು ಲಕ್ಷಕ್ಕೆ ಒತ್ತೆ ಇಡುತ್ತಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಇಬ್ಬರು ಆರೋಪಿಗಳಿಂದ ಸುಮಾರು 2ಕೋಟಿ 30 ಲಕ್ಷಕ್ಕೂ ಮೇಲ್ಪಟ್ಟು ಒಟ್ಟು 37 ಕಾರು ಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ ಎಂದು ತಿಳಿಸಿದರು.   ಸಿಸಿಬಿ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ್, ಸಿಬ್ಬಂದಿಗಳಾದ ಎಸ್.ಎಲ್.ದೇಶನೂರ, ಬಿ.ಎಸ್. ನಾಯ್ಕ, ಡಿ.ಎಚ್. ಮಾಳಗಿ, ಶಂಕರ ಪಾಟೀಲ, ವಿಜಯ ಬಡವನ್ನವರ, ಶಿವಲಿಂಗ ಪಾಟೀಲ, ಬಸವರಾಜ ಕಡ್ಡಿ ಸುದ್ದಿಗೋಷ್ಠಿ ಯಲ್ಲಿದ್ದರು.

► Follow us on –  Facebook / Twitter  / Google+

 

Facebook Comments

Sri Raghav

Admin