ಪೊಲೀಸರಿಗೆ ಶರಣಾದ ಕುಖ್ಯಾತ ಮಾವೋವಾದಿ ನಾಯಕ

ಈ ಸುದ್ದಿಯನ್ನು ಶೇರ್ ಮಾಡಿ

Maoist-leader-Baleswar-Orao
ರಾಂಚಿ, ಅ.26-ಹಲವಾರು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಹಾಗೂ ತನ್ನ ತಲೆಗೆ 5 ಲಕ್ಷ ರೂ.ಗಳ ಬಹುಮಾನ ಹೊಂದಿದ್ದ ಕುಖ್ಯಾತ ಮಾವೋವಾದಿ ನಾಯಕ ಬಲೇಶ್ವರ್ ಒರಾನ್ ಜಾರ್ಖಂಡ್ ಪೊಲೀಸ್ ಮಹಾನಿರ್ದೇಶಕ ಡಿ.ಕೆ.ಪಾಂಡೆ ಅವರ ಮುಂದೆ ಶರಣಾಗತನಾಗಿದ್ದಾನೆ.ಡಿಜಿಪಿ ಪಾಂಡೆ ಮುಂದೆ ನಿನ್ನೆ ಶರಣಾದ ಬಲೇಶ್ವರ್‍ಗೆ ಐದು ಲಕ್ಷ ರೂ.ಗಳ ಚೆಕ್ಕು ಮತ್ತು ಶರಣಾಗತಿ ನೀತಿ ಅಡಿ ಇತರೆ ಪ್ರಯೋಜನ ಮತ್ತು ಅನುಕೂಲಗಳು ಲಭಿಸಲಿವೆ ಎಂದು ಪೊಲೀಸ್ ವಕ್ತಾರ ಎಂ.ಎಸ್.ಬಾಟಿಯಾ ಹೇಳಿದ್ದಾರೆ. ಬಿಹಾರ-ಜಾರ್ಖಂಡ್ ವಿಶೇಷ ಪ್ರದೇಶ ಸಮಿತಿಯ ಉಪ-ವಲಯ ಕಮಾಂಡರ್ ಆಗಿದ್ದ ಈತ ಜುಲೈ 14ರಂದು ಶರಣಾಗತನಾಗಲು ನಿರ್ಧರಿಸಿದ್ದ.

 

► Follow us on –  Facebook / Twitter  / Google+

Facebook Comments

Sri Raghav

Admin