ಪೊಲೀಸರ ಕಾರ್ಯಾಚರಣೆ ಯಶಸ್ವಿ : ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಿಡ್ನಾಪ್ ಪ್ರಕರಣ ಸುಖಾಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

Belagavi-Kidnap--01

ಬೆಳಗಾವಿ,ಏ.19- ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಇವಳ ಸ್ನೇಹಿತೆ ಮತ್ತು ಸ್ನೇಹಿತೆಯ ಲವರ್ ಸೇರಿಕೊಂಡು ಕಿಡ್ನಾಪ್ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ ಅರ್ಪಿತಾ ನಾಯಕ್ (23) ಕಿಡ್ನ್ಯಾಪ್ ಆಗಿರುವ ಯುವತಿ. ಯುವತಿ ನಗರದ ಜಿಐಟಿ ಕಾಲೇಜಿನಲ್ಲಿ ಓದುತ್ತಿದ್ದರು. ನಗರದ ಟಿಳಕವಾಡಿಯ ಸಾಯಿ ಪ್ಲಾಜಾ ಅಪಾಟ್ರ್ಮೆಂಟ್‍ನಲ್ಲಿ ವಾಸವಿದ್ದು, ಇದೇ 17ರಂದು ರಾತ್ರಿ ಊಟಕ್ಕೆಂದು ಸ್ನೇಹಿತೆ ಧಿವ್ಯಾ ಮಲಘಾನ ಜೊತೆ ಹೋದವಳು ವಾಪಸ್ ಬಂದಿರಲ್ಲಾ.ಅರ್ಪಿತಾ ಸ್ನೇಹಿತೆ ದಿವ್ಯಾ ಮಲಘಾನ ಮತ್ತು ದಿವ್ಯಾ ಪ್ರಿಯತಮ ಗದಗ ಮೂಲದ ಕೇಧಾರಿ ಜೊತೆ ಸೇರಿ ಹಣಕ್ಕಾಗಿ ಕಿಡ್ನಾಪ್ ಮಾಡಿದ್ದರು ಎಂದು ತಿಳಿದು ಬಂದಿದೆ. ನಗರದ ಖಾಸಗಿ ಹೊಟೇಲ್‍ನಲ್ಲಿ ಊಟ ಮಾಡಿ. ಹೊರಗೆ ಬಂದು ಎಳೆನೀರಲ್ಲಿ ನಿದ್ದೆ ಮಾತ್ರೆ ಸೇರಿಸಿ ಕುಡಿಸಿ ಕಿಡ್ನಾಪ್ ಮಾಡಿದ್ದರು ಎಂದು ತಿಳಿದುಬಂದಿದೆ.  ನಂತರ ತಾಯಿಗೆ ಕರೆ ಮಾಡಿ ತನ್ನನ್ನು ಅಪಹರಿಸಲಾಗಿದೆ ಅಂತ ಹೇಳಿದ ಯುವತಿ ತಮ್ಮ ಕುಟುಂಬದವರಿಗೆ ತಿಳಿಸಿದ ನಂತರ ಮನೆಯವರಿಂದ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ದ ಕಿಡ್ನಾಪ್ ಕೇಸ್ ದಾಖಲು ಮಾಡಲಾಗಿತ್ತು. ಡಿಸಿಪಿ ಜಿ. ರಾಧಿಕಾ ನೇತೃತ್ವದಲ್ಲಿ ವಿಶೇಷ ತಂಡದಿಂದ ಯುವತಿಯ ಪತ್ತೆಕಾರ್ಯ ನಡೆದಿದೆ. ಪೋಲೀಸರು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದ್ದು ಯುವತಿಯನ್ನು ಗದಗದಲ್ಲಿ ಹಿಡಿದಿರುವ ಪೋಲೀಸರು ನಗರಕ್ಕೆ ಕರೆ ತರುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin