ಪೊಲೀಸರ ರಕ್ಷಣೆ ನಮಗಿದೆ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸಿ : ರಾಜ್ಯಪಾಲ ವಿ.ಆರ್.ವಾಲಾ

ಈ ಸುದ್ದಿಯನ್ನು ಶೇರ್ ಮಾಡಿ

VALA

ಬೆಂಗಳೂರು, ಅ.21- ನಮ್ಮ ಹಿಂದೆ ಪೊಲೀಸರು ಇರುವುದರಿಂದ ಯಾವುದೇ ಭಯ ಪಡಬೇಕಿಲ್ಲ ಎಂಬ ವಿಶ್ವಾಸ ಮೂಡಿಸುವಂತೆ ಕೆಲಸ ನಿರ್ವಹಿಸಬೇಕೆಂದು ರಾಜ್ಯಪಾಲ ವಿ.ಆರ್.ವಾಲಾ ಸಲಹೆ ನೀಡಿದರು.ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪದಕ ವನ್ನು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳಿಗೆ ಪ್ರದಾನ ಮಾಡಿ ಮಾತನಾಡಿದರು.ಸಾರ್ವಜನಿಕರ ವಿಶ್ವಾಸಕ್ಕೆ ಪೊಲೀಸರು ಪಾತ್ರರಾಗಬೇಕು. ಆ ನಿಟ್ಟಿನಲ್ಲಿ ಉತ್ತಮ ಕೆಲಸ ಗಳನ್ನು ಮಾಡಿ ಪೊಲೀಸ್ ಇಲಾಖೆಗೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.
ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗು ವುದು ಸುಲಭದ ಮಾತಲ್ಲ.

ಅದೊಂದು ದೊಡ್ಡ ಸವಾಲು. ಜೀವನದಲ್ಲಿ ಯಾರೂ ನಿರಾಶರಾಗದೆ ಆತ್ಮವಿಶ್ವಾಸದಿಂದ ಉತ್ತಮ ಕಾರ್ಯ ನಿರ್ವಹಿಸಿ ನಾಡಿನ ಪ್ರಜೆಗಳಿಗೆ ನಿಮ್ಮ ಕೆಲಸದಿಂದ ತೃಪ್ತಿಯಾದರೆ ನಿಮ್ಮ ಸೇವೆಯೂ ಸಾರ್ಥಕವಾಗುತ್ತದೆ. ಹಾಗಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಪದಕ ಪಡೆಯುವ ಗುರಿ ಇಟ್ಟುಕೊಳ್ಳಬೇಕು. ರಾಜ್ಯದಲ್ಲಿ ಪೊಲೀಸ್ ಇಲಾಖೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಶಂಸಿಸಿದರು.ವಿಶಿಷ್ಟವಾದ ಸಾಧನೆ, ವೃತ್ತಿಯಲ್ಲಿ ನೈಪುಣ್ಯತೆಯಿಂದ ಕರ್ತವ್ಯ ನಿರ್ವಹಿಸಿದರೆ ಪದಕ ಪಡೆಯಲು ಸಾಧ್ಯವಾಗುತ್ತದೆ. ಇಂದು ಪದಕ ಪಡೆದ ಅಧಿಕಾರಿ ಮತ್ತು ಸಿಬ್ಬಂದಿ ಜೀವನದಲ್ಲಿ ಅಪೂರ್ವವಾದ ಕ್ಷಣವಾಗಿದೆ ಎಂದ ಅವರು, ಪದಕ ಪಡೆ ಯುವುದಕ್ಕಿಂತ ಜನರ ಮನ್ನಣೆ ಪಡೆ ಯುವುದು ಶ್ರೇಷ್ಠವಾದುದು ಎಂದು ಅಭಿಪ್ರಾಯಪಟ್ಟರು.

2013ರ ಗಣರಾಜ್ಯೋತ್ಸವ ದಿನಾಚರಣೆಯ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕವನ್ನು ಹಿರಿಯ ಪೊಲೀಸ್ ಅಧಿಕಾರಿಗಳಾದ ಅಮರ್‍ಕುಮಾರ್ ಪಾಂಡೆ, ಸುನೀಲ್‍ಕುಮಾರ್, ಎಚ್.ಎಸ್.ರೇವಣ್ಣ ಸೇರಿದಂತೆ 4 ಮಂದಿಗೆ ರಾಜ್ಯಪಾಲರು ಪ್ರದಾನ ಮಾಡಿದರು.2013ರ ಸ್ವಾತಂತ್ರ್ಯೋತ್ಸವ ದಿನಾಚರಣೆಯ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕವನ್ನು ನಿವೃತ್ತ ಪೊಲೀಸ್ ಅಧಿಕಾರಿ ವಿಶ್ವನಾಥ್ ಶೆಟ್ಟಿಗೆ ನೀಡಲಾಯಿತು. 2014ರ ಗಣರಾಜ್ಯೋತ್ಸವ ದಿನಾಚರಣೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕವನ್ನು ಹಿರಿಯ ಪೊಲೀಸ್ ಅಧಿಕಾರಿ ಟಿ.ರವಿಂದ್ರನಾಥ್ ಸೇರಿದಂತೆ ಮೂರು ಮಂದಿಗೆ ನೀಡಿ ಗೌರವಿಸಲಾಯಿತು.2012ರ ಗಣರಾಜ್ಯೋತ್ಸವ ದಿನಾ ಚರಣೆಯ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕವನ್ನು ಚಿಕ್ಕೋಡಿ

ಉಪವಿಭಾಗದಡಿವೈಎಸ್‍ಪಿಬಿ.ಎಸ್.ಅಂಗಡಿ ಅವರಿಗೆ, 2013ರ ಗಣರಾಜ್ಯೋತ್ಸವ ದಿನಾಚರಣೆಯ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕವನ್ನು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಪಿ.ಹರಿಶೇಖರನ್, ಕೆ.ವಿ.ಶರತ್‍ಚಂದ್ರ ಸೇರಿದಂತೆ 19 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಿತರಿಸಲಾಯಿತು.2013ರ ಸ್ವಾತಂತ್ರ್ಯೋತ್ಸವ ದಿನಾಚರಣೆಯ ರಾಷ್ಟ್ರಪತಿಗಳ ಶ್ಲಾಘನೀ
ಯ ಪದಕವನ್ನು 17 ಮಂದಿಗೆ ಹಾಗೂ 2014ರ ಗಣರಾಜ್ಯೋತ್ಸವ ದಿನಾಚರಣೆಯ ರಾಷ್ಟ್ರಪತಿಗಳ ಶ್ಲಾಘನೀಯ ಪದಕವನ್ನು 18 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಗೆ ನೀಡಿ ಗೌರವಿಸಲಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin