ಪೊಲೀಸರ ವಿರೋಧದ ನಡುವೆ ಕನಕನಡೆ ಕಾರ್ಯಕ್ರಮಕ್ಕೆ ಪೇಜಾವರ ಶ್ರೀ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

sri
ಉಡುಪಿ, ಅ.23- ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕನಕನಡೆ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆತಿದೆ. ಪೊಲೀಸರ ವಿರೋಧದ ನಡುವೆಯೂ ಪೇಜಾವರ ಶ್ರೀಗಳು ಕನಕ ಮೂರ್ತಿಗೆ ಹೂವಿನ ಹಾರ ಹಾಕಿ ಕನಕ ನಡೆಗೆ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಇದೊಂದು ಸಾಂಕೇತಿಕ ಸ್ವಚ್ಛೀಕರಣ ಬಹಿರಂಗ ಶುದ್ಧಿ ಮಾತ್ರವಲ್ಲ. ಎಲ್ಲರ ಅಂತರಂಗ ಶುದ್ಧಿಯಾಗಬೇಕು. ಮಠ- ಮಠದ ವಾತಾವರಣ ಉದ್ಯಾನವನಗಳನ್ನು ಸ್ವಚ್ಛ ಮಾಡಲಾಗುತ್ತದೆ. ಈ ಕಾರ್ಯಕ್ರಮವು ಸರ್ಕಾರದ ಆದೇಶದಂತೆ ನಡೆಯುತ್ತಿದೆ.

ಇದರ ವಿರುದ್ಧ ಕೆಲಸ ಮಾಡುವುದಿಲ್ಲ. ಈ ಬಗ್ಗೆ ದೇಶಾದ್ಯಂತ ಕಾರ್ಯಕ್ರಮ ನಡೆಯಬೇಕು ಎಂದರು. ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಈ ದಿನಕ್ಕಾಗಿ ನಾವೆಲ್ಲರೂ ಕಾಯುತ್ತಿದ್ದೆವು. ಈ ಕಾರ್ಯಕ್ರಮವು ಉಡುಪಿಯ ಕೃಷ್ಣಮಠಕ್ಕೆ ಸೀಮಿತವಾಗಿದೆ. ಕನಕನಡೆಯಲ್ಲಿ ಹೆಚ್ಚು ದಲಿತರಿದ್ದಾರೆ. ನಾವು ದಲಿತರ ವಿರೋಯಲ್ಲ. ಕನಕನ ಮಾರ್ಗದಲ್ಲೇ ಶ್ರೀಕೃಷ್ಣ ಪರಮಾತ್ಮನನ್ನು ಕಾಣುತ್ತೇವೆ ಎಂದು ತಿಳಿಸಿದರು. ಕನಕನಡೆ ಸ್ವಚ್ಛತಾ ಅಭಿಯಾನಕ್ಕೆ ಪೊಲೀಸರು ಭಾರೀ ಬಂದೋಬಸ್ತ್ ಕೈಗೊಂಡಿದ್ದರು. ಅಷ್ಠಮದ ರಥಬೀದಿಯ ಸುತ್ತಮುತ್ತ ಒಂದು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ರಥಬೀದಿಗೆ ಬರುವ ಆರು ರಸ್ತೆಗಳಲ್ಲಿ ಬ್ಯಾರಿಕೇಟ್‌ಗಳನ್ನು ಹಾಕಲಾಗಿತ್ತು.  ಮುಂಜಾಗ್ರತಾಕ್ರಮವಾಗಿ ಐದು ಕೆಎಸ್‌ಆರ್‌ಪಿ ತುಕಡಿ, ೧೦ ಡಿಎಆರ್ ಪೊಲೀಸ್ ತಂಡ, ಮೂರು ಡಿವೈಎಸ್‌ಪಿಗಳ ನೇತೃತ್ವದಲ್ಲಿ ಮಠದ ಸುತ್ತಮುತ್ತ ಭಾರೀ ಬಂದೋಬಸ್ತ್ ಮಾಡಲಾಗಿತ್ತು.  ಕಾರ್ಯಕ್ರಮದಲ್ಲಿ ಸುಮಾರು ೫೦೦ಕ್ಕೂ ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.

ಕನಕನಡೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ:

ಕಳೆದ ದಿನಗಳಷ್ಟೇ ಚಲೋ ಉಡುಪಿ ಜಾಥಾ ಕಾರ್ಯಕ್ರಮವು ಪೇಜಾವರ ಶ್ರೀಗಳ ನೇತೃತ್ದಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ ಯುವ ಬ್ರಿಗೇಡ್ ಕನಕನಡೆ ಸ್ವಚ್ಛತಾ ಅಭಿಯಾನಕ್ಕೆ ಸಂಘಟಿಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಂಡಿಲ್ಲ. ಹೀಗಾಗಿ ಭಾರೀ ವಿರೋಧದ ನಡುವೆಯೂ ಈ ಕಾರ್ಯಕ್ರಮ ನಡೆಯಿತು.

► Follow us on –  Facebook / Twitter  / Google+

Facebook Comments

Sri Raghav

Admin