ಪೊಲೀಸರ ಸೋಗಲ್ಲಿ ಬಂದು ಮುತ್ತೂಟ್ ಮಿನಿ ಗೋಲ್ಡ್ ದೋಚಿದವರು ಪೊಲೀಸ್ ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

Muttoot-Mini-01

ಬೆಂಗಳೂರು, ನ.4- ಪೊಲೀಸರ ಸೋಗಿನಲ್ಲಿ ಬಂದು ಮುತ್ತೂಟ್ ಮಿನಿ ಗೋಲ್ಡ್ ಕಂಪೆನಿ ಮ್ಯಾನೇಜರ್ ಅಪಹರಿಸಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಲ್ವರು ಆರೋಪಿಗಳು ನಾಗಮಂಗಲ ಮೂಲದವರು ಎಂದು ತಿಳಿದುಬಂದಿದೆ. ಜ್ಞಾನಭಾರತಿ ಬಳಿ ಇದ್ದ ಮುತ್ತೂಟ್ ಮಿನಿ ಕಂಪೆನಿಯಲ್ಲಿ ಕಳೆದ ಅ.21ರಂದು ಅಪಹರಣ ಮತ್ತು ದರೋಡೆ ಪ್ರಕರಣ ನಡೆದಿತ್ತು. ಪೊಲೀಸರ ಸೋಗಿನಲ್ಲಿ ಬಂದು ಫೈನಾನ್ಸ್ ಮ್ಯಾನೇಜರ್ ನಾಗೇಂದ್ರ ಎಂಬುವರನ್ನು ಆರೋಪಿಗಳು ಅಪಹರಿಸಿದ್ದರು.  ಮ್ಯಾನೇಜರ್ ಕೈ-ಕಾಲು ಕಟ್ಟಿ ಕೀ ಕಸಿದುಕೊಂಡು ಫೈನಾನ್ಸ್ನಲ್ಲಿದ್ದ ಹಣ, ಒಡವೆ ದೋಚಿ ಪರಾರಿಯಾಗಿದ್ದರು.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin