ಪೊಲೀಸರ ಸೋಗಿನಲ್ಲಿ ಮಹಿಳೆ ಸರ ಅಪಹರಣ

ಈ ಸುದ್ದಿಯನ್ನು ಶೇರ್ ಮಾಡಿ

chain--snatching

ತುಮಕೂರು,ಅ.18- ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುದಕ್ಕೆ ಇಲ್ಲೊಂದಿದೆ ತಾಜಾ ಉದಾಹರಣೆ. ಪೊಲೀಸರ ಸೋಗಿನಲ್ಲಿ ಬಂದ ಚೋರರು ಮಹಿಳೆಯೊಬ್ಬರ 100 ಗ್ರಾಂ ತೂಕದ ಮಾಂಗಲ್ಯ ಸರ ದೋಚಿ ಪರಾರಿಯಾಗಿರುವ ಘಟನೆ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಾವಗಡದ ರೈನ್‍ಗೇಜ್ ಬಡಾವಣೆಯ ಬಿಬಿ ಹಜಾರ ಚಿನ್ನಾಭರಣ ಕಳೆದುಕೊಂಡ ಮಹಿಳೆ. ರಸ್ತೆಯಲ್ಲಿ ಈಕೆ ನಡೆದು ಹೋಗುವಾಗ ಪೊಲೀಸರ ಸೋಗಿನಲ್ಲಿ ಬಂದ ಚೋರರು ಇಲ್ಲಿ ಕಳ್ಳರಿದ್ದಾರೆ, ಆಭರಣಗಳನ್ನು ಬಿಚ್ಚುಕೊಡುವಂತೆ ಸಲಹೆ ಕೊಟ್ಟು ಆಭರಣಗಳನ್ನು ಪಡೆದು ನಕಲಿ ಚಿನ್ನ ನೀಡಿ ಯಾಮಾರಿಸಿದ್ದಾರೆ. ಮನೆಗೆ ಹೋಗಿ ನೋಡಿದಾಗ ಚಿನ್ನಾಭರಣಗಳು ನಕಲಿಯಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪಾವಗಡ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin