ಪೊಲೀಸರ 5 ರೈಫಲ್ ಕಸಿದು ಉಗ್ರರು ಎಸ್ಕೇಪ್..!
ಈ ಸುದ್ದಿಯನ್ನು ಶೇರ್ ಮಾಡಿ
ಶ್ರೀನಗರ, ಮೇ 3- ಕಾಶ್ಮೀರ ಕಣಿವೆಯಲ್ಲಿ ಉಗ್ರರ ಉಪಟಳ ಮುಂದುವರಿದಿದ್ದು, ಶೋಪಿಯಾನ್ ಜಿಲ್ಲೆಯ ನ್ಯಾಯಾಲಯ ಸಂಕೀರ್ಣದ ಪಹರೆಗೆ ನಿಯೋಜಿಸಲಾಗಿದ್ದ ಐವರು ಪೊಲೀಸರ ಸರ್ವಿಸ್ ರೈಫಲ್ಗಳನ್ನು ಭಯೋತ್ಪಾದಕರು ಕಸಿದು ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಕಾಶ್ಮೀರ ಶೋಪಿಯಾನ್ನ ಕೋರ್ಟ್ ಕಾಂಪ್ಲೆಕ್ಸ್ಗೆ ನುಗ್ಗಿದ ಉಗ್ರರ ಗುಂಪೊಂದು ಕರ್ತವ್ಯದಲ್ಲಿದ್ದ ಐವರು ಪೊಲೀಸರನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ನಂತರ ಅವರ ಬಳಿ ಇದ್ದ ಐದು ಎಸ್ಎಲ್ಆರ್ ರೈಫಲ್ಗಳನ್ನು ಕಸಿದು ಕತ್ತಲಲ್ಲಿ ಕಣ್ಮರೆಯಾದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ರೈಫಲ್ ದೋಚಿ ಪರಾರಿಯಾಗಿರುವ ಉಗ್ರರಿಗಾಗಿ ವ್ಯಾಪಕ ಶೋಧ ಮುಂದುವರಿದಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments