ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ : ಆರ್.ಕೆ.ದತ್ತ

ಈ ಸುದ್ದಿಯನ್ನು ಶೇರ್ ಮಾಡಿ

POlice--01

ಬೆಂಗಳೂರು, ಅ.31- ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ, ಇಲ್ಲಿನ ಜನರು ಒಳ್ಳೆಯವರು ಕರ್ನಾಟಕ ನನಗೆ ತುಂಬಾ ಇಷ್ಟವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ಇಂದಿಲ್ಲಿ ಭಾವೋದ್ವೇಗದಿಂದ ನುಡಿದರು. ಕೋರಮಂಗಲದ ಕವಾಯತ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನ ಸರ್ವೀಸ್‍ನ ಅರ್ಧ ಕೇಂದ್ರ ಸರ್ಕಾರದ ಸೇವೆಯಲ್ಲಿ. ಮತ್ತರ್ಧ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದೇನೆ. ಸಿಬಿಐಗೆ ಹೋದಾಗ ವಾಪಸ್ ಬರುತ್ತೇನೆ ಅಂದುಕೊಂಡಿರಲಿಲ್ಲ. ಕೊನೆಯ ಸೇವೆ ಕರ್ನಾಟಕದಲ್ಲಿ ಸಿಕ್ಕಿದ್ದು ನನ್ನ ಭಾಗ್ಯ ಎಂದರು.Police--06

ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುವುದು ನನ್ನ ಆಶೆಯಾಗಿತ್ತು. ದೇವರ ದಯೆಯಿಂದ ನಾನು ಕರ್ನಾಟಕ ಕೇಡರ್ ಅಧಿಕಾರಿಯಾದೆ. ಬೆಂಗಳೂರು ಅಂದರೆ ನನಗೆ ತುಂಬಾ ಪ್ರೀತಿ. ನಿವೃತ್ತಿಯ ನಂತರದ ಜೀವನವನ್ನು ಇಲ್ಲಿಯೇ ಕಳೆಯುತ್ತೇನೆ ಎಂದು ತಿಳಿಸಿದರು. ಸಮಾರಂಭದಲ್ಲಿ ಕೆಎಸ್‍ಆರ್‍ಪಿಯ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.

Police--04

Police--03

Facebook Comments

Sri Raghav

Admin