ಪೊಲೀಸ್ ಕಮಿಷನರ್ ಕಚೇರಿ ಎದುರು ಕೈ ಕೊಯ್ದುಕೊಂಡು ರೌಡಿ ರಂಪಾಟ

ಈ ಸುದ್ದಿಯನ್ನು ಶೇರ್ ಮಾಡಿ

Rowdya-blrcitym

ಬೆಂಗಳೂರು,ಡಿ.28-ಇನ್‍ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದ ರೌಡಿಶೀಟರ್ ಒಬ್ಬ ಪೊಲೀಸರು ತನ್ನನ್ನು ಪದೇ ಪದೇ ಠಾಣೆಗೆ ಕರೆಸಿ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ಬ್ಲೇಡ್‍ನಿಂದ ಎಡಗೈ ಕೊಯ್ದುಕೊಂಡಿರುವ ಘಟನೆ ನಡೆದಿದೆ.   ಮೈಕೊಲೇಔಟ್ ವ್ಯಾಪ್ತಿಯ ಭೋವಿ ಕಾಲೋನಿ ನಿವಾಸಿ, ರೌಡಿಶೀಟರ್ ಮುನಿಯಪ್ಪ(28) ಎಂಬಾತ ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದ ಬಳಿ ಬಂದು ತನ್ನನ್ನು ಪದೇ ಪದೇ ಪೊಲೀಸರು ಠಾಣೆಗೆ ಕರೆಸಿ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ನನಗೆ ನ್ಯಾಯ ಕೊಡಿಸಿ ಎಂದು ಬ್ಲೇಡ್‍ನಿಂದ ಎಡಗೈನ ಎರಡು ಕಡೆ ಕೊಯ್ದುಕೊಂಡಿದ್ದಾನೆ.

ಇದನ್ನು ಗಮನಿಸಿದ ಆಯುಕ್ತರ ಕಚೇರಿಯಲ್ಲಿದ್ದ ಪೊಲೀಸರು ತಡೆಯಲು ಹೋದಾಗ ಅವರಿಗೂ ಬ್ಲೇಡ್ ಬೀಸಿದ್ದಾನೆ. ಈ ವೇಳೆ ಪೊಲೀಸರು ತಪ್ಪಿಸಿಕೊಂಡು ಆತನನ್ನು ಹಿಡಿದು ಹೊಯ್ಸಳ ವಾಹನದಲ್ಲಿ ಕರೆದೊಯ್ದು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದು , ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.  ಮೈಕೋಲೇಔಟ್ ಠಾಣೆಯ ರೌಡಿಶೀಟರ್ ಆಗಿರುವ ಈತನ ಮೇಲೆ ನಾಲ್ಕು ಪ್ರಕರಣಗಳಿವೆ. ಒಂದು ಕೊಲೆ, ಎರಡು ಕೊಲೆಯತ್ನ ಹಾಗೂ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ (ಪೋಸ್ಕೊ ಕಾಯ್ದೆ) ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ. ಕಳೆದ ರಾತ್ರಿ ಮಹಿಳೆಯೊಬ್ಬರ ಜೊತೆ ಮುನಿಯಪ್ಪ ಜಗಳವಾಡಿ ಬಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin