ಪೊಲೀಸ್ ಠಾಣೆಗೆ ನುಗ್ಗಿದ ‘ನಾಗಪ್ಪ’ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Police-Snake--01

ಕನಕಪುರ, ಫೆ.9- ಕನಕಪುರ ನಗರ ಪೊಲೀಸ್ ಠಾಣಾ ಆವರಣದಲ್ಲಿ ಬೃಹತ್ ಗಾತ್ರದ ನಾಗರ ಹಾವೊಂದು ಪ್ರತ್ಯಕ್ಷವಾಗಿದ್ದು ಅದನ್ನು ಜೀವಂತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ. ನಾಗರ ಹಾವೊಂದು ಠಾಣೆಯ ಕಾಂಪೌಂಡ್‍ನಲ್ಲಿ ಬಂದು ಸೇರಿಕೊಂಡಿದ್ದನ್ನು ಕರ್ತವ್ಯದಲ್ಲಿದ್ದ ಪೊಲೀಸರು ನೋಡಿದ ನಾಗರಹಾವು ಬಿಲದೊಳಗೆ ಅಡಗಿ ಕುಳಿತಿದ್ದು , ಕೂಡಲೇ ಸ್ನೇಕ್ ರಾಘವೇಂದ್ರ ಹಾಗೂ ಆತನ ಸ್ನೇಹಿತ ಪುನೀತ್ ಅವರಿಗೆ ತಿಳಿಸಿದ್ದಾರೆ.

ಕಳೆದ ಎರಡು ದಿನವಾದರೂ ಹಾವು ಹೊರಬಾರದ ಕಾರಣ ಪೊಲೀಸರು ಹಾವನ್ನು ಕಾದು ಕುಳಿತು ಹೊರ ಬಂದ ತಕ್ಷಣ ಅಲ್ಲಿಯೇ ಇದ್ದ ರಾಘವೇಂದ್ರ ಮತ್ತು ಪುನೀತ್‍ರಿಂದ ಹಾವನ್ನು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ. ದೊಡ್ಡದಾದ ನಾಗರ ಹಾವನ್ನು ಹಿಡಿದು ನಂತರ ಶಿವನಹಳ್ಳಿ ಸಮೀಪದ ಹಸಿರು ಬೆಟ್ಟದ ತಪ್ಪಲಿನಲ್ಲಿ ಸುರಕ್ಷಿತವಾಗಿ ಬಿಟ್ಟು ಬರಲಾಗಿದೆ.  ಇಂದಿನ ತಮ್ಮ ದೈನಂದಿನ ಚಟುವಟಿಕೆಗಳ ಜೊತೆ ಪ್ರಜ್ಞಾವಂತ ಯುವಕರು ಹಾವುಗಳನ್ನು ಹಿಡಿಯುವಂತಹ ಸಾಹಸ ವಿದ್ಯೆಗಳನ್ನು ಕಲಿತು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಆಕಸ್ಮಿಕವಾಗಿ ಆಗುವ ಇಂತಹ ಅವಘಡಗಳಿಂದ ಸಾರ್ವಜನಿಕರನ್ನು ರಕ್ಷಿಸಬಹುದು ಎಂದು ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅನಂತ್‍ರಾಂ ಸ್ನೇಕ್ ರಾಘವೇಂದ್ರ ಮತ್ತು ಪುನೀತರ ಸಾಹಸದ ಬಗ್ಗೆ ಶ್ಲಾಘಿಸಿದರು.

Facebook Comments

Sri Raghav

Admin