ಪೊಲೀಸ್ ಠಾಣೆಯಲ್ಲಿ 7 ವರ್ಷದ ಬಾಲಕಿಯಿಂದ ಆತ್ಮಾಹುತಿ ಸ್ಫೋಟ, ಮೂವರು ಅಧಿಕಾರಿಗಳಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Girl-Blast

ಡಮಾಸ್ಕಸ್, ಡಿ.17-ಸ್ಫೋಟಕಗಳ ಬೆಲ್ಟ್ ಧರಿಸಿದ್ದ ಏಳು ವರ್ಷ ಬಾಲೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ಆತ್ಮಾಹತ್ಯಾ ಸ್ಫೋಟ ನಡೆಸಿದ ಘಟನೆ ಸಿರಿಯಾ ರಾಜಧಾನಿ ಡಮಾಸ್ಕಸ್ನಲ್ಲಿ ನಡೆಸಿದೆ. ಈ ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ತೀವ್ರ ಗಾಯಗೊಂಡಿದ್ದಾರೆ.   ವಾಯುವ್ಯ ಡಮಾಸ್ಕಸ್ನ ಜನನಿಬಿಡ ಮಿದಾನ್ನಲ್ಲಿ ಬಾಲಕಿಯಿಂದ ನಿನ್ನೆ ಈ ಆತ್ಮಾಹುತಿ ದಾಳಿ ನಡೆದಿರುವುದಾಗಿ ಸಿರಿಯಾ ಸರ್ಕಾರಿ ಸ್ವಾಮ್ಯದ ಅಲ್-ವತನ್ ದೈನಿಕ ವರದಿ ಮಾಡಿದೆ. ಈ ಸುದ್ದಿಯನ್ನು ದಿನಪತ್ರಿಕೆಯ ಫೇಸ್ಬುಕ್ ಪುಟದಲ್ಲೂ ಸಹ ಪೊೀಸ್ಟ್ ಮಾಡಲಾಗಿದೆ.

ಶೌಚಾಲಯಕ್ಕೆ ಹೋಗಬೇಕು ಎಂಬ ಸೋಗಿನಲ್ಲಿ ಪೊಲೀಸ್ ಠಾಣೆ ಒಳಗೆ ಬಂದ ಏಳು ವರ್ಷದ ಬಾಲಕಿ ತನ್ನನ್ನು ತಾನು ಸ್ಫೋಟಿಸಿಕೊಂಡಳು ಎಂದು ಡಮಾಸ್ಕಸ್ ಪೊಲೀಸರು ತಿಳಿಸಿದ್ದಾರೆ.
ಸಿರಿಯಾ ಸರ್ಕಾರಿ ಒಡೆತನದಲ್ಲಿರುವ ಇಖ್ಬರಿಯಾ ನ್ಯೂಸ್ ಚಾನೆಲ್ನಲ್ಲಿ ಬಾಲಕಿಯ ಮಬ್ಬಾದ ಚಿತ್ರ ಮತ್ತು ಪೊಲೀಸ್ ಠಾಣೆ ಜಖಂಗೊಂಡಿರುವ ದೃಶ್ಯಗಳನ್ನು ಬಿತ್ತರಿಸಲಾಗಿದೆ.
ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ರಾಕೆಟ್ಗಳು ಮತ್ತು ಮಾರ್ಟರ್ಗಳಿ ದಾಳಿ ನಡೆಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ನಗರದಲ್ಲಿ ಆತ್ಮಾಹುತಿ ದಾಳಿ ನಡೆಯುವುದು ಅಪರೂಪ. ಈಗ ಪೊಲೀಸ್ ಠಾಣೆಯೊಳಗೇ ಬಾಲಕಿಯಿಂದ ಆತ್ಮಾಹುತಿ ದಾಳಿ ನಡೆದಿರುವುದರಿಂದ ಇಲಾಖೆ ಮತ್ತಷ್ಟು ಆತಂಕಗೊಂಡಿದೆ.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin