ಪೊಲೀಸ್ ಠಾಣೆ ಸರಹದ್ದಿನಲ್ಲಿ ವೈಜ್ಞಾನಿಕ ಮರು ವಿಂಗಡಣೆ

ಈ ಸುದ್ದಿಯನ್ನು ಶೇರ್ ಮಾಡಿ

Session-Parameshwar

ಬೆಂಗಳೂರು, ಮಾ.21- ಮೂವತ್ತು ವರ್ಷಗಳ ನಂತರ ಪೊಲೀಸ್ ಠಾಣೆಗಳ ಸರಹದ್ದನ್ನು ವೈಜ್ಞಾನಿಕವಾಗಿ ಮರು ವಿಂಗಡಣೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಸೋಮಶೇಖರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳು ಹಾಗೂ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರಹದ್ದನ್ನು ಮರುವಿಂಗಡಿಸಲಾಗಿದೆ. ಬೆಂಗಳೂರಿನಲ್ಲಿ 1.30 ಕೋಟಿ ಜನಸಂಖ್ಯೆ ಇದ್ದು, ಅಪರಾಧ ಪ್ರಕರಣಗಳು ಹೆಚ್ಚಾಗಿವೆ.

ಆಗ್ನೇಯ ವಿಭಾಗದಲ್ಲಿ ಒಂದು ವರ್ಷಕ್ಕೆ 10ಸಾವಿರ ಪ್ರಕರಣಗಳು ದಾಖಲಾಗಿವೆ. ಮಡಿವಾಳ ಠಾಣೆವೊಂದರಲ್ಲೇ 2400 ಪ್ರಕರಣಗಳು ದಾಖಲಾಗಿವೆ. ಈಶಾನ್ಯ ಭಾಗದಲ್ಲಿ 4ಸಾವಿರ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.  ಕೆಲವು ಪೊಲೀಸ್ ಠಾಣೆ ಸರಹದ್ದನ್ನು ವಿಂಗಡಿಸುವಾಗ ಒಂದೇ ಬಡಾವಣೆಯ ಕೆಲವು ಮುಖ್ಯ ರಸ್ತೆಗಳು ಬೇರೆ ಬೇರೆ ಬಡಾವಣೆಯ ಸರಹದ್ದಿನಲ್ಲಿ ಸೇರಿರುತ್ತವೆ. ಸಾರ್ವಜನಿಕರು ಪೊಲೀಸ್ ಠಾಣೆಗೆ ಬರಲು, ಪೊಲೀಸ್ ಸಿಬ್ಬಂದಿ ಸ್ಥಳಗಳಿಗೆ ತೆರಳಲು ಅನುಕೂಲವಾಗುವಂತೆ ಹತ್ತಿರದ ಪೊಲೀಸ್ ಠಾಣೆಗೆ ಸೇರಿಸಿ ಸಾರ್ವಜನಿಕರ ಗಮನಕ್ಕೆ ತರಲಾಗುವುದು ಎಂದರು.

ಜ್ಞಾನಭಾರತಿ ಪೊಲೀಸ್ ಠಾಣೆ ಸರಹದ್ದು ಹೆಚ್ಚು ವಿಸ್ತಾರವಾಗಿದ್ದು, ಆಡಳಿತ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಠಾಣೆ ವಿಂಗಡಿಸಲಾಗಿದೆ. ಕೆಂಗೇರಿ ಠಾಣೆ ಸರಹದ್ದಿಗೆ ಹತ್ತಿರದಲ್ಲಿದ್ದ ಕುಂಬಳಗೂಡಿಗೆ ದೂರವಾಗಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಕೆಂಗೇರಿ ಠಾಣೆಗೆ ಸೇರಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಸೋಮಶೇಖರ್ ಅವರು ಮಾತನಾಡಿ, ಅರ್ಧ ಕಿ.ಮೀ. ದೂರದ ಗ್ರಾಮವನ್ನು 25 ಕಿ.ಮೀ. ದೂರದ ಪೊಲೀಸ್ ಠಾಣೆಗೆ ಸೇರಿಸಲಾಗಿದೆ. ಇದನ್ನು ಸರಿಪಡಿಸಿ ಎಂದರು.  ಬನಶಂಕರಿ 6ನೇ ಹಂತ, ವಿಶ್ವೇಶ್ವರಯ್ಯ ಬಡಾವಣೆ ಮತ್ತು ಆರ್‍ಆರ್ ಬಡಾವಣೆ ವ್ಯಾಪ್ತಿಯನ್ನು ಒಂದೇ ಠಾಣೆಗೆ ಸೇರಿಸುವ ಪ್ರಸ್ತಾವನೆ ಇಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin