ಪೊಲೀಸ್ ತರಬೇತಿ ಸಂಸ್ಥೆಗೆ ಉಚಿತ ಕಂಪ್ಯೂಟರ್

ಈ ಸುದ್ದಿಯನ್ನು ಶೇರ್ ಮಾಡಿ

kaduru--police

ಕಡೂರು, ಆ. 30-ಭಾರತೀಯ ಸೇನೆ ಮತ್ತು ಪೊಲೀಸ್ ಇಲಾಖೆ ದೇಶ ಸೇವೆಯಲ್ಲಿ ಮತ್ತು ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಲೈಫ್‍ಲೈನ್ ಫೀಡ್ಸ್ ಸಂಸ್ಥೆಯ ಹಣಕಾಸು ವಿಭಾಗದ ಉಪ ಹಿರಿಯ ವ್ಯವಸ್ಥಾಪಕ ಮುರಾರ್ಜಿ ತಿಳಿಸಿದರು.ಗೆದ್ಲೇಹಳ್ಳಿ ಸಮೀಪದ ಪೊಲೀಸ್ ತರಬೇತಿ ಸಂಸ್ಥೆಗೆ ರೂ 3.5 ಲಕ್ಷ ಮೌಲ್ಯದ 10 ಕಂಪ್ಯೂಟರ್‍ಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.

ಇಂತಹ ಇಲಾಖೆಗಳಿಗೆ ಅಗತ್ಯ ಸಲಕರಣೆಗಳು, ಪರಿಕರಗಳು ಬೇಕಾಗಿರುತ್ತವೆ, ಎಲ್ಲವನ್ನು ಸರ್ಕಾರ ಪೂರೈಸಲು ಸಾಧ್ಯವಾಗುವುದಿಲ್ಲ, ಅಂತಹ ಸಮಯದಲ್ಲಿ ಸಂಘಸಂಸ್ಥೆಗಳು ಸಹಾಯಹಸ್ತವನ್ನು ನೀಡಿದಲ್ಲಿ ಆ ಇಲಾಖೆಗಳು ಇನ್ನು ಉತ್ತಮವಾಗಿ ಜನಪರ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.ತರಬೇತಿ ಶಾಲೆಯ ಪ್ರಾಂಶುಪಾಲ ಚನ್ನಯ್ಯ ಕಂಪ್ಯೂಟರ್‍ಗಳು ಕೇಂದ್ರದ ಕಾರ್ಯಗಳಿಗೆ ಹಾಗೂ ತರಬೇತಿಗೆ ಸಹಾಯಕವಾಗಲಿದ್ದು ಲೈಫ್‍ಲೈನ್ ಸಂಸ್ಥೆಗೆ ಅಭಿನಂದಿಸುವುದಾಗಿ ಹೇಳಿದರು.ತರಬೇತಿ ವೃತ್ತ ನಿರೀಕ್ಷಕ ನಾರಾಯಣ ಪೂಜಾರಿ, ಲೈಫ್‍ಲೈನ್ ಸಂಸ್ಥೆಯ ಎಚ್.ಆರ್. ತೇಜಸ್, ಗಿರೀಶ್, ಅಕ್ರಮ್, ರವಿಕುಮಾರ್, ತರಬೇತಿ ಸಂಸ್ಥೆಯ ಪ್ರಥಮ ದರ್ಜೆ ಸಹಾಯಕ ಸೋಮೇಶ್ ಮುಂತಾದವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin