ಪೊಲೀಸ್ ದಾಳಿಗೆ ಹೆದರಿ 3 ಉಗ್ರರಿಂದ ಆತ್ಮಾಹುತಿ ಸ್ಫೋಟ

ಈ ಸುದ್ದಿಯನ್ನು ಶೇರ್ ಮಾಡಿ

Police--041

ಢಾಕಾ, ಮಾ.16- ತಮ್ಮ ಅಡಗು ತಾಣಗಳ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಮೂವರು ಕುಖ್ಯಾತ ಇಸ್ಲಾಮಿಕ್ ಭಯೋತ್ಪಾದಕರು ತಮ್ಮನ್ನು ತಾವು ಸ್ಪೋಟಿಸಿಕೊಂಡು ಮೃತಪಟ್ಟಿರುವ ಘಟನೆ ಬಾಂಗ್ಲಾದೇಶದ ಬಂದರು ನಗರಿ ಚಿಟ್ಟಗಾಂಗ್ ಹೊರವಲಯದಲ್ಲಿ ನಡೆದಿದೆ. ಉಗ್ರರನ್ನು ಮಟ್ಟ ಹಾಕಲು ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸಂದರ್ಭದಲ್ಲೇ ಈ ಉಗ್ರರು ಹತರಾಗಿದ್ದಾರೆ.   ಭಯೋತ್ಪಾದನೆ ನಿಗ್ರಹ ಮತ್ತು ಪರಿವರ್ತನಾ ಅಪರಾಧ ಘಟಕ, ವಿಶೇಷ ಶಸ್ತ್ರಾಸ್ತ್ರ ಮತ್ತು ಷಡ್ಯಂತ್ರ ತಂಡ(ಸ್ವಾಟ್), ಕ್ಷಿಪ್ರ ಕಾರ್ಯಾಚರಣೆ ತುಕ್ಕಡಿ ಹಾಗೂ ಚಿಟ್ಟಗಾಂಗ್ ಜಿಲ್ಲಾ ಪೊಲೀಸರು ಸೀತಾಕುಂಗ್ ಪ್ರದೇಶದಲ್ಲಿ ನಡೆಸಿದ ಆಪರೇಷನ್ ಅಸಲ್ಟ್-16 ಹೆಸರಿನ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದೆ.

ಉಗ್ರರು ಅಡಗಿದ್ದ ಎರಡು ಮಹಡಿಗಳ ಕಟ್ಟಡಗಳನ್ನು ಪೊಲೀಸರು ಸುತ್ತುವರೆದಾಗ ಭೀಕರ ಗುಂಡಿನ ಚಕಮಕಿ ನಡೆಯಿತು. ಜಂಟಿ ಕಾರ್ಯಾಚರಣೆ ಪಡೆಗಳ ಕೈ ಮೇಲಾದಾಗ ಈ ಮೂವರು ಉಗ್ರರು ಆತ್ಮಹತ್ಯಾ ಸ್ಫೋಟಕಗಳ ಮೂಲಕ ತಮ್ಮನ್ನು ತಾವು ಸ್ಫೋಟಿಸಿಕೊಂಡು ಮೃತಪಟ್ಟರು ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin