ಪೊಲೀಸ್ ಪೋಸ್ಟ್ ಮೇಲೆ ಸೇನಾ ಸಮವಸ್ತ್ರ ಧರಿಸಿದ್ದ ಉಗ್ರರ ದಾಳಿ : ರೈಫಲ್ಗಳೊಂದಿಗೆ ಪರಾರಿ
ಶ್ರೀನಗರ, ಅ.17-ಸೇನಾ ಸಮವಸ್ತ್ರ ಧರಿಸಿದ್ದ ಉಗ್ರರು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಟಿವಿ ಟವರ್ ರಕ್ಷಣೆಗಿದ್ದ ಪೊಲೀಸ್ ಪೋಸ್ಟ್ ಮೇಲೆ ದಾಳಿ ನಡೆಸಿ ಪೊಲೀಸರ ಐದು ಸರ್ವಿಸ್ ರೈಫಲ್ಗಯಳನ್ನು ಕಸಿದು ಪರಾರಿಯಾಗಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಪೊಲೀಸ್ ಚೌಕಿ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ.
ಆನಂತನಾಗ್ ಜಿಲ್ಲೆಯ ದಾರೂ ಪ್ರದೇಶದ ದಲ್ವಾಯಶ್ನ ಟಿವಿ ಟವರ್ನ ಗಾರ್ಡ್ರೂಘಮ್ಗೆದ ನುಗ್ಗಿದ್ದ ಮಿಲಿಟರಿ ಸಮವಸ್ತ್ರಧಾರಿ ಉಗ್ರರು ಭಾರತೀಯ ಮೀಸಲು ಪೊಲೀಸರನ್ನು ಬೆದರಿಸಿ ಶಸ್ತ್ರಾಸ್ತ್ರಗಳನ್ನು ದೋಚಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಉಗ್ರರು ಮೂರು ಎಸ್ಎದಲ್ಆಪರ್ ರೈಫಲ್ಗ್ಳು, ಒಂದು ಕಾರ್ಬೈನ್ ಬಂದೂಕು ಮತ್ತು ಒಂದು ಇನ್ಸಾರಸ್ ರೈಫಲ್ಅದನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕೃತ್ಯದ ನಂತರ ಇಡೀ ದಕ್ಷಿಣ ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಉಗ್ರರ ಬೇಟೆ ಕಾರ್ಯಾಚರಣೆ ಮುಂದುವರಿದಿದೆ.
ಪೊಲೀಸ್ ಚೌಕಿ ಮೇಲೆ ಗುಂಡು:
ಇನ್ನೊಂದು ಪ್ರಕರಣದಲ್ಲಿ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸಿರ್ಮೂದ ಪ್ರದೇಶದ ಅಲ್ಪಸಂಖ್ಯಾತ ಸಮುದಾಯದ ರಕ್ಷಣೆಗಿದ್ದ ಓರ್ವ ಪೊಲೀಸ್ ಮೇಲೆ ಉಗ್ರಗಾಮಿಗಳು ನಿನ್ನೆ ತಡರಾತ್ರಿ ಗುಂಡು ಹಾರಿಸಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿದಾಗ ಉಗ್ರರು ಕತ್ತಲಲ್ಲಿ ಕಣ್ಮರೆಯಾದರು.