ಪೊಲೀಸ್ ಬಿಗಿ ಭದ್ರತೆಯಲ್ಲಿ ಪರೀಕ್ಷೆಗೆ ಹಾಜರಾದ ಹರಿಕೃಷ್ಣ
ಧಾರವಾಡ,ಆ 7- ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಹಿನ್ನಲೆಯಲ್ಲಿ ಬಂಧನಕೊಳ್ಳಗಾಗಿ ಬಳ್ಳಾರಿ ಜೈಲು ಸೇರಿದ್ದ ಹರಿಕೃಷ್ಣ ಹೆಬಸೂರ ಆವರಿಗೆ ಐ.ಎ.ಎಸ್. ಪರೀಕ್ಷೆ ಬರೆಯಲು ನ್ಯಾಯಾಲಯ ಅನುಮತಿ ನೀಡಿದ್ದು, ಭಾರೀ ಬಂದೋಬಸ್ತ್ ನಲ್ಲಿ ಪರೀಕ್ಷಾ ಕೆಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದರು. ನಗರದ ನುಗ್ಗಿಕೇರಿ ಸಮೀಪದ ಕೇಂದ್ರೀಯ ವಿದ್ಯಾಲಯದಲ್ಲಿ ಇವರಿಗಾಗಿಯೇ ವ್ಯವಸ್ಥೆ ಮಾಡಲಾಗಿದ್ದ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದರು. ಮಹದಾಯಿ ತೀರ್ಪು ಕರ್ನಾಟಕದ ವಿರುದ್ಧ ಬಂದ ಹಿನ್ನಲೆಯಲ್ಲಿ ನವಲಗುಂದ ಬಂದ್ಗೆ ಕರೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಹರಿಕೃಷ್ಣ ಅವರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರ ವಿರುದ್ಧ ಪ್ರಕರಂಣ ದಾಖಲಿಸಿ ಬಳ್ಳಾರಿ ಜೈಲಿಗೆ ಕಳುಹಿಸಲಾಗಿತ್ತು.
ಪರೀಕ್ಷೆ ಬರೆಯಲು ಹರಿಕೃಷ್ಣನಿಗೆ ಅನುಮತಿ ನೀಡಬೇಕೆಂದು ವಕೀಲರಾದ ವಿ.ಡಿ. ಕೋನರೆಡ್ಡಿ ಅವರು ನ್ಯಾಯಾಲಯದ ಅನುಮತಿ ಕೇಳಿದ್ದರು. ನ್ಯಾಯಾಲಯ ಪರೀಕ್ಷೆಗೆ ಹಾಜರಾಗಲು ಮಾತ್ರ ಅನುಮತಿ ನೀಡಿದೆ. ಪರೀಕ್ಷೆ ನಂತರ ಇವರನ್ನು ಮತ್ತೆ ಬಳ್ಳಾರಿ ಜೈಲಿಗೆ ಕಳುಹಿಸಬೇಕೆಂದು ನ್ಯಾಯಾಲಯ ಆದೇಶ ನೀಡಿದೆ.