ಪೋರ್ಚುಗಲ್ ಪ್ರಧಾನಿ ಡಾ.ಆಂಟೋನಿಯೊ ಭಾರತೀಯ ಮೂಲದವರಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

COASTHA

ಬೆಂಗಳೂರು, ಜ.8- ನಾನೂ ಕೂಡ ಭಾರತೀಯ ಮೂಲದವನು…. ನನಗೆ ಭಾರತ ಮೂಲದವನು ಎಂದು ಹೇಳಿಕೊಳ್ಳುವುದು ಅತ್ಯಂತ ಹೆಮ್ಮೆ… ಹೀಗೆಂದು ಹೇಳಿ ಪೋರ್ಚುಗಲ್ ಪ್ರಧಾನಿ ಡಾ.ಆಂಟೋನಿಯೊ ಕೋಸ್ಟಾ ಸಂಭ್ರಮಿಸಿದರು.  ನಗರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿರುವ 14ನೇ ಪ್ರವಾಸಿ ಭಾರತೀಯ ದಿವಸ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾನು ಕೂಡ ಭಾರತೀಯ ಮೂಲದವನೇ. ನನ್ನ ಬೇರುಗಳು ಗೋವಾದಲ್ಲಿವೆ ಎಂದು ಹೇಳಿತ್ತಾ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದ ಕೂಡಲೇ ಸಭಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿ ಖುಷಿಪಟ್ಟರು.  ಗೋವಾದ ಮಡಗಾವ್‍ನಲ್ಲಿ ನನ್ನ ಸಂಬಂಕರು ಈಗಲೂ ನೆಲೆಸಿದ್ದಾರೆ. ಹಾಗಾಗಿ ನಾನು ಭಾರತೀಯನು ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಭಾರತೀಯ ಮೂಲದ ಸಮುದಾಯದವರು  ಪೋರ್ಚುಗಲ್ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ತಮ್ಮದೇ ಆದ ಕಾಣಿಕೆಯನ್ನು ನೀಡಿದ್ದಾರೆ ಎಂದು ಆಂಟೋನಿಯಾ ಕೋಸ್ಟಾ ಹೇಳಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin