ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದ ‘ಆರೋಹಣ’

ಈ ಸುದ್ದಿಯನ್ನು ಶೇರ್ ಮಾಡಿ

arohana

ನಾಗತಿಹಳ್ಳಿ ಚಂದ್ರಶೇಖರ್, ನಾಗಾಭರಣರಂಥ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿರುವ ಶ್ರೀಧರ್ ಶೆಟ್ಟಿ ಅವರ ನಿರ್ದೇಶನದ ಮೊದಲ ಚಿತ್ರ ಆರೋಹಣ.
ಇದೀಗ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹಳ್ಳಿಯಲ್ಲಿ ನಡೆಯುವ ತಂದೆ-ಮಗನ ಕತೆ ಇದಾಗಿದ್ದು ಹಳ್ಳಿ ಪಂಚಾಯ್ತಿ ರಾಜಕೀಯ ಹಾಗೂ ಪ್ರೇಮ ಪ್ರಕರಣದಂಥ ವಿಷಯಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಬೆಂಗಳೂರು ಅಲ್ಲದೆ, ನೈಸ್ ರಸ್ತೆಯಲ್ಲಿನ ಮಂಗನಹಳ್ಳಿ ಸುತ್ತ ಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಶ್ರೀಧರ್ ಶೆಟ್ಟಿ ಅವರೇ ಈ ಚಿತ್ರದ ಕಥೆ, ಚಿತ್ರಕತೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿವೆ.
ಮಲ್ಲಿಕಾರ್ಜುನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುಶೀಲ್ ಕುಮಾರ್ ನಿರ್ಮಿಸುತ್ತಿರುವ ಈಚಿತ್ರಕ್ಕೆ ಕೆ ವೈ ಶಿವಪುತ್ರ ಛಾಯಾಗ್ರಹಣ, ಉತ್ತಮ್ ರಾಜ್ ಆರ್ ಎನ್, ರಾಹುಲ್ ರಾಘವನ್ ಸಂಗೀತ, ಕೆ ಕಲ್ಯಾಣ್, ಶ್ರೀಧರ್ ಶೆಟ್ಟಿ ಸಾಹಿತ್ಯ, ಜಗ್ಗು ನೃತ್ಯ ನಿರ್ದೇಶನ, ವೈಲೆಂಟ್ ವೇಲು ಸಾಹಸ, ದುರ್ಗಾ.ಪಿ.ಎಸ್ ಸಂಕಲನವಿದೆ. ಸುಶೀಲ್ ಕುಮಾರ್ ರೋಹಿತ್ ಶೆಟ್ಟಿ, ಪ್ರೀತಿ, ಶ್ರೀಧರ್ ಶೆಟ್ಟಿ, ರುದ್ರೇಗೌಡ, ಉಮೇಶ್ ಪುಂಗ, ಧೀಕ್ಷಾ, ಮೈತ್ರಿ, ರವಿ, ಆಶಾ, ಮಣಿ, ಜೂನಿಯರ್ ಸಾಯಿಬಾಬಾ ಮುಂತಾದವರ ತಾರಾಬಳಗವಿದೆ.

Facebook Comments

Sri Raghav

Admin