ಪೌರಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ಇಳಿಸಿದ ಗ್ರಾಪಂ ಅಧ್ಯಕ್ಷೆ , ಪಿಡಿಒ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

Mysuru--001

ಮೈಸೂರು,ಜೂ.9– ಪೌರಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮುಂಡಿ ಬೆಟ್ಟದ ಗ್ರಾಪಪಂಚಾಯ್ತಿ ಅಧ್ಯಕ್ಷೆ ಗೀತಾ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಆನಂದ್ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಅಲ್ಲದೆ ಆನಂದ್ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗುರುಶಾಂತಪ್ಪ ಅವರು ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಇತ್ತೀಚೆಗೆಷ್ಟೇ ಚಾಮುಂಡಿಬೆಟ್ಟದ ಗ್ರಾಮಪಂಚಾಯ್ತಿ ವ್ಯಾಪ್ತಿಯ ತಾವರೆಕೆರೆ ಗ್ರಾಮದ ಗ್ರಾಪಂ ಅಧ್ಯಕ್ಷೆ ಗೀತಾ ಅವರ ಮನೆ ಮುಂಭಾಗದಲ್ಲಿ ತುಂಬು ಹರಿಯುತ್ತಿದ್ದ ಮ್ಯಾನ್‍ಹೋಲ್‍ನ್ನು ಸ್ವಚ್ಚಗೊಳಿಸುವಂತೆ ಪೌರಕಾರ್ಮಿಕ ಗಣೇಶ್‍ಗೆ ಪಿಡಿಒ ಆನಂದ್ ಸೂಚಿಸಿದ್ದರು. ಅಧ್ಯಕ್ಷೆ ಗೀತಾ ಹೇಳಿದಂತೆ ಸ್ವಚ್ಛತೆ ಕಾರ್ಯ ನಡೆಸದಿದ್ದರೆ ಕೆಲಸದಿಂದ ವಜಾ ಮಾಡುವುದಾಗಿ ಆನಂದ್ ಪೌರಕಾರ್ಮಿಕನಿಗೆ ತಾಕೀತು ಮಾಡಿದ್ದರು. ಹೀಗಾಗಿ ಆತ ಮ್ಯಾನ್‍ಹೋಲ್‍ಗೆ ಇಳಿದಿದ್ದ. ಈ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin