ಪೌರಕಾರ್ಮಿಕರಾಯ್ತು ಈಗ ಬಿಬಿಎಂಪಿ ನೌಕರರಿಗೂ ಬಿಸಿಯೂಟದ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

KENGERI
ಕೆಂಗೇರಿ, ಡಿ.30- ಹಸಿವು ಮುಕ್ತ ರಾಜ್ಯವನ್ನಾಗಿಸುವ ಸರ್ಕಾರದ ಕನಸು ನನಸು ಮಾಡಲು ಪೌರ ಕಾರ್ಮಿಕರಿಗೂ ಬಿಸಿಯೂಟ ಯೋಜನೆ ಜಾರಿಗೊಳಿಸಿರುವುದು ಬಡವರೆಡೆಗಿನ ಕಾಳಜಿ ಎಂದು ಮೇಯರ್ ಜಿ.ಪದ್ಮಾವತಿ ತಿಳಿಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ, ಉಲ್ಲಾಳು, ಹೇರೋಹಳ್ಳಿ, ಹೆಮ್ಮಿಗೆಪುರ, ದೊಡ್ಡ ಬಿದಿರೆಕಲ್ಲು ವಾರ್ಡ್ ಗಳ ಪೌರ ಕಾರ್ಮಿಕರ ಬಿಸಿಯೂಟ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  ಪೌರ ಕಾರ್ಮಿಕರು ನಗರದ ದೇವರಿದ್ದಂತೆ. ಅವರ ಪರಿಶ್ರಮ-ಕಾಳಜಿಯಿಂದಾಗಿ ನಗರ ಸ್ವಚ್ಛತೆಯಿಂದಿರಲು ಸಾಧ್ಯ. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬಿಬಿಎಂಪಿ ಬದ್ಧವಾಗಿದೆ ಎಂದು ತಿಳಿಸಿದರು.

ಪೌರ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸುವ ಕುರಿತು ಅಕಾರಿಗಳು ನಿಗಾ ವಹಿಸಿ ಕಾರ್ಯ ನಿರ್ವಹಿಸಬೇಕೆಂದರು.  ಜ.10ರ ನಂತರ ಪೌರ ಕಾರ್ಮಿಕರಿಗೆ 12,200 ರೂ. ಸಂಬಳ ನೀಡಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು. ಕಾರ್ಮಿಕರ ಪಿಎಫ್ ಹಾಗೂ ಇನ್ಸುರೆನ್ಸ್ ಹಣ ಬಿಬಿಎಂಪಿ ಭರಿಸಲಿದೆ. ಸರ್ಕಾರದ ಮಾರ್ಗದರ್ಶನದಲ್ಲಿ ಮಾರ್ಚ್ ನಂತರ 32,000 ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗುವುದು ಎಂದರು.  ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ರಾಜರಾಜೇಶ್ವರಿ ವಲಯದ ಅಪರ ಆಯುಕ್ತ ಡಾ.ಬಿ.ವೀರಭದ್ರಪ್ಪರವರಿಗೆ ಹಲವಾರು ಬಾರಿ ಕೆಂಗೇರಿ ಉಪನಗರದ ಗಾಂನಗರ, ಹೆಮ್ಮಿಗೆಪುರ ಸೇರಿದಂತೆ ಇನ್ನಿತರ ವಾರ್ಡ್‍ಗಳಲ್ಲಿ ಹಲವಾರು ವರ್ಷಗಳಿಂದ ವಾಸಿಸುವವರಿಗೆ ಹಕ್ಕು ಪತ್ರ ವಿತರಿಸಲು ಸೂಚಿಸಿದ್ದರೂ ಇದುವರೆಗೂ ನೀಡದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಜಣ್ಣ ಬಿಬಿಎಂಪಿ ಸದಸ್ಯರಾದ ಆರ್ಯ ಶ್ರೀನಿವಾಸ್, ಎಂ.ವಾಸುದೇವ್, ಶಾರದಾ ಮುನಿರಾಜು, ವಿ.ವಿ ಸತ್ಯನಾರಾಯಣ, ಕಾರ್ಯ ಪಾಲಕ ಅಭಿಯಂತರ ಲೋಕೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್, ಸಹಾಯಕ ಅಭಿಯಂತರರಾದ ತಿಮ್ಮಪ್ಪ, ದಯಾನಂದ್, ಆರೋಗ್ಯಾಕಾರಿ ಸತ್ಯಮೂರ್ತಿ ಪಾಲ್ಗೊಂಡಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Facebook Comments

Sri Raghav

Admin