ಪೌರಕಾರ್ಮಿಕರ ನಿವೇಶನ ವಿವಾದ ಇತ್ಯರ್ಥಕ್ಕೆ ತಹಸೀಲ್ದಾರ್‍ಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

chikkamangaluru

ಚಿಕ್ಕಮಗಳೂರು, ಆ.30- ಪೌರಕಾರ್ಮಿಕರಿಗೆ ಹಂಚಿಕೆಯಾಗಿರುವ ನಿವೇಶನದ ವಿವಾದ ಬಗೆಹರಿಸುವಂತೆ ಕೋರಿ ಪೌರಸೇವಾ ನೌಕರರ ಸಂಘದಿಂದ ತಹಸೀಲ್ದಾರ್ ಶಿವಣ್ಣರವರಿಗೆ ಮನವಿ ಸಲ್ಲಿಸಲಾಯಿತು.ಸಂಘದ ಅಧ್ಯಕ್ಷ ಬಿ.ಅಣ್ಣಯ್ಯ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಿನಿ ವಿಧನಸೌಧಕ್ಕೆ ತೆರಳಿ ಪದಾಧಿಕಾರಿಗಳು ಹಾಗೂ ನೌಕರರು ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿದರು.ತಾಲೂಕು ಅಧ್ಯಕ್ಷ ಬಿ.ಅಣ್ಣಯ್ಯ ಮಾತನಾಡಿ, ಕಳೆದ ಹಲವು ದಶಕಗಳಿಂದ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಯಾವುದೆ ಸ್ವಂತ ಸೂರಿಲ್ಲದೆ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.

ಈ ಸಂಬಂಧ ಉಪ್ಪಳ್ಳಿ ಗ್ರಾಮದ ಸರ್ವೆ ನಂ.27ರಲ್ಲಿ 2.35 ಎಕರೆ ಜಮೀನನನ್ನು ನಗರಸಭೆಯಿಂದ 95 ಮಂದಿ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು.ಆದರೆ ಖಾಸಗಿ ವ್ಯಕ್ತಿಯೋರ್ವರು ಹೈಕೋರ್ಟ್‍ನಲ್ಲಿ ದಾವೆ ಹಾಕಿದ ಪರಿಣಾಮ ವಿವಾದ ಸೃಷ್ಟಿಸಿದ್ದು ದಾವೆಯನ್ನು ಕೋರ್ಟ್ ವಜಾ ಮಾಡಿ ಎಸಿ ಕೋರ್ಟ್‍ಗೆ ವರ್ಗಾಯಿಸಿದೆ. ಆದ ಕಾರಣ ಈ ಪ್ರಕರಣದ ಕಡತವನ್ನು ಪಡೆಯಲಾಗಿರುವ ಕುರಿತು ಹಾಗೂ ಈ ಬಗ್ಗೆ ಕೈಗೊಂಡ ಕ್ರಮದ ಮಾಹಿತಿ ನೀಡುವಂತೆ ಮನವಿ ಮಾಡಿದರು.

ತಹಶೀಲ್ದಾರ್ ಅವರು ತಮ್ಮ ಅರ್ಜಿಯನ್ನು ಪರಿಶೀಲಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಜೊತೆಗೆ ಎಸಿಯವರು ಪೌರಕಾರ್ಮಿಕರಿಗೆ ಮಂಜೂರಾತಿ ನೀಡಿ ಆದೇಶಿಸಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.  ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಕುಮಾರ್, ನಾಗರಾಜ್, ಎನ್.ಅಣ್ಣಯ್ಯ,ಮಂಜಯ್ಯ,ಕೋಲಯ್ಯ ಇತರರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin