ಪ್ಯಾರಿಸ್‍ನಲ್ಲಿ ನಟಿ ಮಲ್ಲಿಕಾ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ ಬಾಲಿವುಡ್

ಈ ಸುದ್ದಿಯನ್ನು ಶೇರ್ ಮಾಡಿ

Mallika

ಮುಂಬೈ, ನ.18-ಹಾಲಿವುಡ್‍ನಲ್ಲಿ ಅದೃಷ್ಟ ಪರೀಕ್ಷೆ ನಡೆಸುತ್ತಿರುವ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಮೇಲೆ ಪ್ಯಾರಿಸ್‍ನಲ್ಲಿ ಮುಸುಕುಧಾರಿ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದನ್ನು ಹಿಂದಿ ಚಿತ್ರರಂಗದ ನಟ-ನಟಿಯರು ಮತ್ತು ನಿರ್ದೇಶಕ-ನಿರ್ಮಾಪಕರು ಖಂಡಿಸಿದ್ದಾರೆ.  ವಿದೇಶದಲ್ಲಿರುವ ಬಾಲಿವುಡ್ ತಾರೆಯರಿಗೆ ಅಲ್ಲಿ ಸರ್ಕಾರಗಳು ಸೂಕ್ತ ರಕ್ಷಣೆ ಒದಗಿಸಬೇಕೆಂದು ಹಿಂದಿ ಚಿತ್ರರಂಗದ ಖ್ಯಾತನಾಮರು ಆಗ್ರಹಿಸಿದ್ದಾರೆ.  ತನ್ನ ಸ್ನೇಹಿತನೊಂದಿಗೆ ಅಪಾರ್ಟ್‍ಮೆಂಟ್‍ಗೆ ಆಗಮಿಸಿದ ಶೆರಾವತ್ ಮೇಲೆ ಮೂವರು ಮುಸುಕುದಾರಿಗಳು ಏಕಾಏಕಿ ಆಶ್ರುವಾಯು ಪ್ರಯೋಗಿಸಿ ನಂತರ ಇಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಬಾಲಿವುಡ್ ವಿದೇಶದಲ್ಲಿರುವ ತಾರೆಯ ರಕ್ಷಣೆಗೆ ಒತ್ತಾಯಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin