ಪ್ರಜಾಪ್ರಭುತ್ವವನ್ನು ಹಾಳುಮಾಡುತ್ತಿರುವ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಿ : ವಾಟಾಳ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.17- ಪಕ್ಷಾಂತರಿಗಳು ಪ್ರಜಾಪ್ರಭುತ್ವನ್ನು ಹಾಳುಮಾಡುತ್ತಿದ್ದು, ಅಂತಹವರಿಗೆ ಮತದಾರರು ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿದರು.

ನಗರದ ರೈಲ್ವೆ ನಿಲ್ದಾಣ ಬಳಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಪಕ್ಷಾಂತರ ಮಾಡಿರುವ ಅನರ್ಹ ಶಾಸಕರು ಜೈಲಿನಲ್ಲಿ ಇರಬೇಕು. ಅವರು ಮತ್ತೆ ಶಾಸನ ಸಭೆಗೆ ಆರಿಸಿ ಬರಬಾರದು. ಇಂತಹವರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಉಪಚುನಾವಣೆಯಲ್ಲಿ ಇವರ್ಯಾರಿಗೂ ಮತಹಾಕಬಾರದೆಂದು ಮನವಿ ಮಾಡಿದರು.

ಉತ್ತರದಲ್ಲಿ ಪಕ್ಷಾಂತರಿಗಳನ್ನು ಅಲ್ಲಿನ ಜನ ಸೋಲಿಸಿದ್ದಾರೆ ಅದೇ ರೀತಿ ನಮ್ಮ ರಾಜ್ಯದಲ್ಲೂ ಎಲ್ಲಾ ಅನರ್ಹ ಶಾಸಕರನ್ನು ಸೋಲಿಸಬೇಕೆಂದು ವಾಟಾಳ್ ಗುಡುಗಿದರು. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹಾಳುಮಾಡುತ್ತಿರುವವರ ವಿರುದ್ಧ ಹೋರಾಡಲು ನಾನು ಶಾಸಕನಾಗಬೇಕು. ಅದಕ್ಕಾಗಿ ಈ ಉಪ ಚುನಾವಣೆಯಲ್ಲಿ ಬೆಂಗಳೂರಿನ ಶಿವಾಜಿನಗರ ಮತ್ತು ಮಹಾಲಕ್ಷ್ಮಿಲೇಔಟ್ ಕ್ಷೇತ್ರಗಳಿಂದ ಕಣಕ್ಕಿಳಿಯುತ್ತಿದ್ದೇನೆ ಎಂದು ಹೇಳಿದರು.

ಯಡವಟ್ಟು ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರೆ ಯಡವಟ್ಟು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವ್ಯವಸ್ಥೆಯನ್ನು ಸರಿಪಡಿಸಲು ನಾನು ಶಾಸಕನಾಗಬೇಕು. ಅದಕ್ಕಾಗಿ ಸ್ಪರ್ಧಿಸಿದ್ದೇನೆ ಎಂದು ಹೇಳಿದರು.

Facebook Comments

Sri Raghav

Admin