ಪ್ರಜ್ಞಾ ಸೂತ್ರದಿಂದ ಸುಂದರ ಗ್ರಾಮ

ಈ ಸುದ್ದಿಯನ್ನು ಶೇರ್ ಮಾಡಿ

turvekere

ತುರುವೇಕೆರೆ, ಆ.15- ಗ್ರಾಮೀಣ ಭಾಗದ ಜನರು ತಮ್ಮ ಗ್ರಾಮದ ಕೆರೆ, ಬಾವಿ ಹಾಗೂ ಇತ್ಯಾದಿ ಪ್ರದೇಶಗಳಲ್ಲಿ ಮಲಿನ ಮಾಡದಂತೆ ಪ್ರಜ್ಞಾ ಸೂತ್ರಗಳನ್ನು ಅನುಷ್ಠಾನ ಮಾಡಿದಾಗ ಮಾತ್ರ ಸುಂದರ ಗ್ರಾಮ ಮತ್ತು ಸ್ವಚ್ಛ ಆರೋಗ್ಯ ಪಡೆಯಲು ಸಾಧ್ಯ ಎಂದು ಆರೋಗ್ಯ ಇಲಾಖೆಯ ಸಹಾಯಕ ಮುದ್ದೇಗೌಡ ತಿಳಿಸಿದರು.ಕಸಬಾ ಹೋಬಳಿಯ ಆನೆಕೆರೆ ಬೋವಿ ಕಾಲೋನಿ ದೇವಸ್ಥಾನ ಮತ್ತು ಅಂಗನವಾಡಿ ಆವರಣದಲ್ಲಿ ನಾಗರಿಕ ಪ್ರಜ್ಞಾ ಅಭಿಯಾನದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಸಂಸ್ಥೆ ನಾಗರೀಕ ಪ್ರಜ್ಞಾ ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ , ಶಾಲಾ ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿದೆ.

ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.ಆನೆಕೆರೆ ಬೋವಿ ಕಾಲೋನಿ ದೇವಸ್ಥಾನ ಮತ್ತು ಅಂಗನವಾಡಿ, ಶಾಲಾ ಆವರಣದಲ್ಲಿಸ್ವಚ್ಛತೆ ಮಾಡಲಾಯಿತು.ಮುಖಂಡರಾದ ರಮೇಶ್, ವಲಯ ಮೇಲ್ವಿಚಾರಕರಾದ ದೇವಿಕಾ, ಸೇವಾಪ್ರತಿನಿಧಿಗಳಾದ ಮೋಹನ ಕುಮಾರಿ, ಸಂಘದ ಸದಸ್ಯರಾದ ಪ್ರೇಮ, ಆನೆಕೆರೆ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin