ಪ್ರತಿದಿನ ತೈಲಬೆಲೆ ಪರಿಷ್ಕರಣೆಗೆ ವಿರೋಧಿಸಿ ಬಂಕ್‍ಗಳು ಬಂದ್, ವಾಹನ ಸವಾರರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

Petrol-B-unk-Bandh

ಬೆಂಗಳೂರು,ಜೂ.16-ಪ್ರತಿದಿನ ತೈಲ ಬೆಲೆ ಪರಿಷ್ಕರಣೆ, ದರ ಬದಲಾವಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಇಂದು ಪೆಟ್ರೋಲ್ ಬಂಕ್ ಮಾಲೀಕರು ರಾಜ್ಯಾದ್ಯಂತ ಬಂಕ್‍ಗಳನ್ನು ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದ್ದಾರೆ.   ಇಂದು ಮಧ್ಯರಾತ್ರಿ 12 ಗಂಟೆವರೆಗೂ ಪೆಟ್ರೋಲ್ ಬಂಕ್‍ಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ರಾಜ್ಯ ಪೆಟ್ರೋಲ್ ಬಂಕ್‍ಗಳ ಮಾಲೀಕರ ಸಂಘದ ಅಧ್ಯಕ್ಷ ಮಂಜಪ್ಪ ತಿಳಿಸಿದ್ದಾರೆ.

ದಿನದಿನವೂ ಪೆಟ್ರೋಲ್ ಮತ್ತು ಡೀಸೆಲ್ ಧಾರಣೆಯನ್ನು ಕಿರಾಣಿ ಅಂಗಡಿಗಳಲ್ಲಿ ಹಾಕುವಂತೆ ಪರಿಷ್ಕøತ ದರವನ್ನು ಪ್ರಕಟಿಸುವುದು ಮತ್ತು ಅದರಂತೆ ವ್ಯವಹಾರ ನಡೆಸುವುದು ಅತ್ಯಂತ ಕಠಿಣವಾದ ಕೆಲಸವಾಗಿದ್ದು , ಇದರಿಂದ ಬಂಕ್ ಮಾಲೀಕರಿಗೆ ಭಾರೀ ನಷ್ಟ ಉಂಟಾಗುತ್ತದೆ ಎಂದು ಬಂಕ್ ಮಾಲೀಕರು ತಮ್ಮ ಸಂಕಷ್ಟ ತೆರೆದಿಟ್ಟಿದ್ದಾರೆ.  ಅಧಿಕಾರಿಗಳ ಒತ್ತಡದಿಂದಾಗಿ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಪ್ರಮುಖವಾಗಿ ಮೈಸೂರು, ತುಮಕೂರು, ಹಾವೇರಿ, ರಾಮನಗರ, ಮಂಡ್ಯ ಮತ್ತಿತರ ಜಿಲ್ಲೆಗಳಲ್ಲಿ ಪೆಟ್ರೋಲ್ ಬಂಕ್‍ಗಳು ಸಂಪೂರ್ಣ ಬಂದ್ ಆಗಿದ್ದು ವಾಹನ ಸವಾರರು ಪೆಟ್ರೋಲ್ ಬಂಕ್‍ಗಳಿಗೆ ತೆರಳಿ ವಾಪಸ್ಸಾಗುತ್ತಿದ್ದಾರೆ.

ಜನರ ಪರದಾಟ:

ರಾಜ್ಯಾದ್ಯಂತ ಪೆಟ್ರೋಲ್ ಬಂಕ್ ಮಾಲೀಕರು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಪೆಟ್ರೋಲ್ ಬಂಕ್‍ಗಳನ್ನು ಇಂದು ಬೆಳಗಿನಿಂದ ಬಂದ್ ಮಾಡಿದ್ದರಿಂದಾಗಿ ನಿತ್ಯ ತಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಳ್ಳುವ ಸವರಾರರು ಪರದಾಡುವಂತಾಯಿತು.  ಅಲ್ಲಲ್ಲಿ ಒಂದೆರಡು ಬಂಕ್‍ಗಳಲ್ಲಿ ಮಾತ್ರ ಪೆಟ್ರೋಲ್ ಬಂಕ್‍ಗಳಲ್ಲಿ ಮಾತ್ರ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ತುಂಬಿಸುತ್ತಿದದ್ದು ಕಂಡುಬಂತು. ಇದನ್ನು ಹೊರತುಪಡಿಸಿದರೆ ಬಹುತೇಕ ಬಂಕ್‍ಗಳು ಬಂದಾಗಿದ್ದವು.

ಮೈಸೂರು, ತುಮಕೂರು, ರಾಮನಗರ, ಹಾವೇರಿ, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎಲ್ಲ ಪೆಟ್ರೋಲ್ ಬಂಕ್‍ಗಳು ಸಂಪೂರ್ಣವಾಗಿ ಬಂದಾಗಿದ್ದು , ಬಂಕ್ ಸಿಬ್ಬಂದಿಗಳು ತಮ್ಮ ಬಂಕ್‍ಗಳ ಬಳಿ ಹರಟೆಯಲ್ಲಿ ತೊಡಗಿರುವುದು ಸರ್ವೆ ಸಾಮಾನ್ಯವಾಗಿದೆ.   ಆದರೂ ಕೂಡ ಬಳ್ಳಾರಿ, ದಾವಣಗೆರೆ, ಕಲಬುರುಗಿ, ಕಾರವಾರ, ಕೊಡಗು, ಚಿತ್ರದುರ್ಗ ಸೇರಿದಂತೆ ಕೆಲವು ಜಿಲ್ಲೆಗಳ್ಳಲ್ಲಿ ಮಾತ್ರ ಕೆಲವು ಬಂಕ್‍ಗಳಲ್ಲಿ ಪೆಟ್ರೋಲ್ ಲಭ್ಯವಿದೆ ಎಂದು ವರದಿಯಾಗಿದೆ.

ಪ್ರಮುಖವಾಗಿ ರಾಜಧಾನಿ ಬೆಂಗಳೂರು ನಗರದಲ್ಲಿ ವಾಹನ ಸವಾರರು ಪೆಟ್ರೋಲ್ ಸಿಗದೇ ಪರದಾಡುತ್ತಿರುವ ದೃಶ್ಯ ಕಂಡುಬಂದಿದೆ. ಇದಲ್ಲದೆ ಇಂದು ಮಧ್ಯರಾತ್ರಿ ಬಂದ್ ಅವಧಿ ಮುಗಿದ ನಂತರ ತಮ್ಮಲ್ಲಿ ಸ್ಟಾಕ್ ಇರುವ ಪೆಟ್ರೋಲ್ ಮತ್ತು ಡೀಸೆಲ್‍ಗಳನ್ನು ಮಾತ್ರ ಮಾರಾಟ ಮಾಡಿ ಹೊಸದಾಗಿ ಕಂಪನಿಗಳಿಂದ ತೈಲ ಖರೀದಿಸದಿರಲು ನಿರ್ಧರಿಸಿರುವುದಾಗಿ ರಾಜ್ಯ ಬಂಕ್ ಮಾಲೀಕರ ಸಂಘ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin