ಪ್ರತಿಭಟನೆಗಿಳಿದ 700ಕ್ಕೂ ಹೆಚ್ಚು ರೇಸ್‍ಕೋರ್ಸ್ ನೌಕರರು

ಈ ಸುದ್ದಿಯನ್ನು ಶೇರ್ ಮಾಡಿ


ಬೆಂಗಳೂರು,ಅ.11-ಸರ್ಕಾರ ಹಾಗೂ ರೇಸ್‍ಕೋರ್ಸ್ ಆಡಳಿತ ಮಂಡಳಿಯ ನಡುವಿನ ಗುದ್ದಾಟದಿಂದಾಗಿ ಬಡಪಾಯಿ ನೌಕರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತಮ್ಮ ಸಮಸ್ಯೆಗಳನ್ನು ಸರ್ಕಾರವೂ ಆಲಿಸುತ್ತಿಲ್ಲ, ಆಡಳಿತ ಮಂಡಳಿಯು ಕೇಳುತ್ತಿಲ್ಲ ಎಂದು ತೀವ್ರ ಬೇಸರಗೊಂಡಿರುವ ರೇಸ್‍ಕೋರ್ಸ್ ನೌಕರರು ಇಂದು ರೇಸ್‍ಕೋರ್ಸ್ ಮುಂಭಾಗ ಪ್ರತಿಭಟನೆ ನಡೆಸಿದರು. ಸರ್ಕಾರ ಹಾಗೂ ಆಡಳಿತ ಮಂಡಳಿಯ ಜಟಾಪಟಿಯಿಂದಾಗಿ ಕಳೆದ 40 ದಿನಗಳಿಂದ ಕೆಲಸವಿಲ್ಲದೆ ಬೀದಿಪಾಲಾಗಿದ್ದೇವೆ ಎಂದು ನೌಕರರು ಈ ವೇಳೆ ಅಳಲು ತೋಡಿಕೊಂಡರು.

ಪ್ರತಿಭಟನೆಯಲ್ಲಿ 700ಕ್ಕೂ ಹೆಚ್ಚು ನೌಕರರು ಪಾಲ್ಗೊಂಡಿದ್ದರು. ಲೈಸೆನ್ಸ್ ನವೀಕರಣ ಮಾಡದ ಹಿನ್ನೆಲೆಯಲ್ಲಿ ರೇಸ್‍ಕೋರ್ಸ್ ಲೈಸೆನ್ಸ್ ರದ್ದುಪಡಿಸಲಾಗಿದೆ. ಹಾಗಾಗಿ 40 ದಿನಗಳಿಂದ ರೇಸ್‍ಕೋರ್ಸ್‍ನಲ್ಲಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.

Facebook Comments

Sri Raghav

Admin