ಪ್ರತಿಭಟನೆಯಿಂದ ಹೊತ್ತಿ ಉರಿಯುತ್ತಿದೆ ಡಾರ್ಜಿಲಿಂಗ್‍ : ಸಮುದಾಯ ಭವನ, ಟಿಎಂಸಿ ಕಚೇರಿ ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

Fir-ne--01

ಡಾರ್ಜಿಲಿಂಗ್, ಜು.20-ಪ್ರತ್ಯೇಕ ಗೂರ್ಖಾಲ್ಯಾಂಡ್ ರಚನೆಗಾಗಿ ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಿಂದ ನಲುಗಿರುವ ಪಶ್ಚಿಮ ಬಂಗಾಳದ ಮೋಹಕ ಗಿರಿಧಾಮ ಡಾರ್ಜಿಲಿಂಗ್‍ನಲ್ಲಿ ದುಷ್ಕರ್ಮಿಗಳ ಪುಂಡಾಟ ಇನ್ನಷ್ಟು ತೀವ್ರವಾಗಿದೆ. ಶತಮಾನದಷ್ಟು ಹಳೆಯದಾದ ಸಮುದಾಯ ಭವನ, ತೃಣಮೂಲ ಕಾಂಗ್ರೆಸ್ ಕಚೇರಿ ಹಾಗೂ ವಾಹನಗಳು ಪ್ರತಿಭಟನಾಕಾರರ ಆಕ್ರೋಶದಿಂದ ಬೆಂಕಿಗಾಹುತಿಯಾಗಿವೆ.

ಕುರ್ಸಿಯೊಂಗ್ ಉಪವಲಯದಲ್ಲಿ 100 ವರ್ಷಗಳಷ್ಟು ಹಳೆಯದಾದ ರಾಜೇಶ್ವರಿ ಸಮುದಾಯ ಭವನಕ್ಕೆ ಗೂರ್ಖಾ ಜನಮುಕ್ತಿ (ಜಿಜೆಎಂ) ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಕೆಲವು ಕಟ್ಟಡಗಳು ಮತ್ತು ವಾಹನಗಳು ಅಗ್ನಿಗಾಹುತಿಯಾಗಿದ್ದು, ಹಿಂಸಾಚಾರ ಮತ್ತೆ ಭುಗಿಲೆದ್ದಿದೆ.  ಡಾರ್ಜಿಲಿಂಗ್‍ನಲ್ಲಿ ಟಿಎಂಸಿ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಚೌಕ್‍ಬಜಾರ್‍ನಲ್ಲಿ ಪೊಲೀಸ್ ವಾಹನದ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ, ಅಲ್ಲದೇ ಟಿಎಸ್‍ಸಿ ಕೌನ್ಸಿಲರ್ ಒಬ್ಬರಿಗೆ ಸೇರಿದ ಗ್ಯಾರೇಜ್‍ಗೆ ಬೆಂಕಿ ಹಚ್ಚಿದ್ದಾರೆ.ಈ ಘಟನೆಗಳಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಆದರೆ ಹಿಂಸಾಚಾರ ಉಲ್ಬಣಗೊಂಡಿರುವುದರಿಂದ ಗಿರಿಧಾಮದಾದ್ಯಂತ ಭಾರೀ ಬಂದೋಬಸ್ತ್ ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin