ಪ್ರತಿಭಟನೆ ಫೋಟೋ ತೆಗೆಯದ ವಿದ್ಯಾರ್ಥಿಗೆ ಚೂರಿಯಿಂದ ಇರಿತ

ಈ ಸುದ್ದಿಯನ್ನು ಶೇರ್ ಮಾಡಿ

Hariyana
ಸೋನಿಪತ್(ಹರ್ಯಾಣ), ಜೂ.2-ಕೇಂದ್ರ ಸರ್ಕಾರವು ಗೋಹತ್ಯೆ ನಿಷೇಧಕ್ಕೆ ಅಧಿಸೂಚನೆ ಹೊರಡಿಸಿದ ನಂತರ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ಮರುಕಳಿಸುತ್ತಿದೆ. ಪ್ರತಿಭಟನೆಯ ಫೋಟೋ ತೆಗೆಯಲಿಲ್ಲ ಎಂಬ ಕಾರಣಕ್ಕಾಗಿ ಗೋರಕ್ಷಕರು ವಿದ್ಯಾರ್ಥಿಯೊಬ್ಬನಿಗೆ ಚೂರಿಯಿಂದ ಇರಿದು ಕೊಲ್ಲಲ್ಲು ಯತ್ನಿಸಿದ ಘಟನೆ ಹರ್ಯಾಣದ ಸೋನಿಪತ್ ಜಿಲ್ಲೆಯಲ್ಲಿ ನಡೆದಿದೆ.   ಇರಿತದಿಂದ ತೀವ್ರ ಗಾಯಗೊಂಡಿ ರುವ ಬಿಎ ಎರಡನೇ ವರ್ಷದ ವಿದ್ಯಾರ್ಥಿ ಶಿವಂ ದೆಹಲಿಯ ಆಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   ಕೇರಳದಲ್ಲಿ ಕೋಣವನ್ನು ಕಡಿದಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಬೇಕೆಂದು ಆಗ್ರಹಿಸಿ ಗೋರಕ್ಷಕ್ ಸೇವಾ ದಳ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು.ಅಲ್ಲಿಗೆ ತನ್ನ ಪತ್ರಕರ್ತ ಗೆಳೆಯನೊಂದಿಗೆ ಶಿವಂ ಆಗಮಿಸಿದ್ದರು. ಶಿವಂ ಬಳಿ ಕ್ಯಾಮೆರಾ ಇತ್ತು. ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಫೋಟೋ ತೆಗೆಯುವಂತೆ ಶಿವಂಗೆ ಗೋರಕ್ಷಕರು ಹೇಳಿದ್ದರು. ಆದರೆ ನಿರಾಕರಿಸಿದ್ದರಿಂದ ಅವರು ಶಿವಂ ಜೊತೆ ಜಗಳವಾಡಿದರು. ಸ್ಥಳದಲ್ಲಿದ್ದವರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.   ಶಿವಂ ಅಲ್ಲಿಂದ ತೆರಳಿದ ನಂತರ ಅವರನ್ನು ಹಿಂಬಾಲಿಸಿದ ಗೋರಕ್ಷಕರು ಚಾಕು-ಚೂರಿಯಿಂದ ಹೊಟ್ಟೆ, ಎದೆ ಮತ್ತು ಕೈಗಳಿಗೆ ಇರಿದು ಪರಾರಿಯಾದರು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ದೆಹಲಿಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಜೈಬ್ ಸಿಂಗ್ ಹೇಳಿದ್ದಾರೆ. ಈ ಸಂಬಂಧ ಕೆಲವು ಗೋರಕ್ಷಕರನ್ನು ಬಂಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin