ಪ್ರತಿಷ್ಠಿತ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Student--01

ಬೆಂಗಳೂರು, ಅ.8-ನಗರ ಹೊರವಲಯದ ಬೆಳ್ಳಂದೂರು ಸಮೀಪವಿರುವ ಪ್ರತಿಷ್ಠಿತ ಚೈತನ್ಯ ಟೆಕ್ನೋ ಕಾಲೇಜಿನ ಶೌಚಾಲಯದಲ್ಲಿ ನಿಗೂಢ ರೀತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಮೂಲತಃ ಧಾರವಾಡದ ಸಾರ್ಥಕ್ ಪುರಾಣಿಕ್(17)ನ ಮೃತದೇಹ ಇಂದು ಬೆಳಗಿನ ಜಾವ ಕಾಲೇಜಿನ ಶೌಚಾಲಯದಲ್ಲಿ ಪತ್ತೆಯಾಗಿದ್ದು, ವಿದ್ಯಾರ್ಥಿಗಳ ಪೋಷಕರು ಬೆಚ್ಚಿಬೀಳುವಂತೆ ಮಾಡಿದೆ.ಚೈತನ್ಯ ಕಾಲೇಜಿನಲ್ಲಿ ಹಾಸ್ಟೆಲ್‍ನಲ್ಲಿ ಕಳೆದ ಎರಡು ವರ್ಷಗಳಿಂದ ನೆಲೆಸಿದ್ದ ಪ್ರಸ್ತುತ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಧಾರವಾಡದಲ್ಲಿ ಎಸ್‍ಎಸ್‍ಎಲ್‍ಸಿ ಪೂರೈಸಿದ ಸಾರ್ಥಕ್‍ನ ಪೋಷಕರಾದ ಶ್ರೀಕಾಂತ್ ಪುರಾಣಿಕ್ ಮತ್ತು ಸುಚೇತ್ರಾ ದಂಪತಿ ಈ ಕಾಲೇಜಿಗೆ ಸೇರಿಸಿದ್ದರು. ನಿನ್ನೆ ಶನಿವಾರ ಕಾಲೇಜು ಮುಗಿಸಿಕೊಂಡು ಹಾಸ್ಟೆಲ್‍ನ ರೂಂಗೆ ಬಂದ ಸಾರ್ಥಕ್ ಖುಷಿಯಂದಲೇ ಸಹಪಾಠಿಗಳೊಂದಿಗೆ ಬೆರೆತಿದ್ದರು. ಆದರೆ ರಾತ್ರಿ ಟಾಯ್ಲೆಟ್‍ಗೆ ಹೋಗಿದ್ದ ಆತ ಬೆಳಗ್ಗೆಯಾದರೂ ವಾಪಸ್ಸಾಗಿರಲಿಲ್ಲ. ಇದರಿಂದ ಅನುಮಾನಗೊಂಡ ಸ್ನೇಹಿತರು ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ.

ತಕ್ಷಣ ಇಲ್ಲಿಗೆ ಬಂದ ಕೆಲಸ ಸಿಬ್ಬಂದಿಗಳು ಶೌಚಾಲಯದ ಬಾಗಿಲು ಒಡೆದು ನೋಡಿದಾಗ ಸಾರ್ಥಕ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ಕಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin