ಪ್ರತಿ ಎಂಬಿಗೆ 2 ಪೈಸೆ ದರದಲ್ಲಿ ವೈಫೈ

ಈ ಸುದ್ದಿಯನ್ನು ಶೇರ್ ಮಾಡಿ

Wifei--01

ನವದೆಹಲಿ, ಮಾ.7-ದೇಶದ ಇಂಟರ್‍ನೆಟ್ ಬಳಕೆದಾರರಿಗೆ ಸ್ಪರ್ಧಾತ್ಮಕ ದರದಲ್ಲಿ ಅನ್ಬತರ್ಜಾಲ ಸೌಲಭ್ಯ ಒದಗಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಯೋಜನೆ ರೂಪಿಸಿದೆ. ಸುಲಭ ದರದಲ್ಲಿ ವೈಫೈ ಹೊಂದಲು ಪ್ರತಿ ಎಂಬಿಗೆ (ಮೆಗಾ ಬೈಟ್) 2 ಪೈಸೆಗೆ ಇಂಟರ್‍ನೆಟ್ ಸೇವೆ ನೀಡಲು ಉದ್ದೇಶಿಸಲಾಗಿದೆ. ಪ್ರಸ್ತುತ ಪ್ರತಿ ಎಂಬಿಗೆ 10 ಪೈಸೆ ದರವಿದೆ.   ಸಾಮಾನ್ಯ ಗ್ರಾಹಕರು, ಸಮುದಾಯಗಳು, ಸಣ್ಣ ಉದ್ದಿಮೆದಾರರು ಹಾಗೂ ಕಂಟೆಂಟ್ ಮತ್ತು ಅಪ್ಲಿಕೇಷನ್ ಪೂರೈಕೆದಾರರಿಗೆ ಕೈಗೆಟುಕುವ ದರದಲ್ಲಿ ಹೈ-ಸ್ಪೀಡ್ ಇಂಟರ್‍ನೆಟ್ ಸೌಲಭ್ಯ ಒದಗಿಸುವ ಮೂಲಕ ಹೆಚ್ಚು ಜನರನ್ನು ಈ ವ್ಯಾಪ್ತಿಗೆ ಒಳಪಡಿಸುವುದು ಟ್ರಾಯ್ ಉದ್ದೇಶವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin