ಪ್ರತ್ಯೇಕ ಪ್ರಕರಣಗಳಲ್ಲಿ ರೈಲಿಗೆ ಸಿಕ್ಕಿ ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Crime

ಬೆಂಗಳೂರು, ಆ.15- ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಹಾಗೂ ಪುರುಷ ನೊಬ್ಬ ರೈಲಿಗೆ ಸಿಕ್ಕಿ ಸಾವನ್ನಪ್ಪಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ವ್ಯಕ್ತಿ ಸಾವು: ಇಂದು ಬೆಳಿಗ್ಗೆ ಎಚ್ಎಂಟಿ ಶಾಲೆ ಎದುರಿನ ರೈಲ್ವೆ ಬ್ರಿಡ್ಜ್ ಬಳಿ ಮೂಲತಃ ಹೊನ್ನಾಳಿ ತಾಲೂಕಿನ ರಾಮು (45) ಎಂಬುವರು ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ.
ರಾಜ ಗೋಪಾಲನಗರದ ಲಗ್ಗೆರೆ ನಿವಾಸಿಯಾದ ಈ ವ್ಯಕ್ತಿ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದು, ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಅಪರಿಚಿತ ಮಹಿಳೆ ಸಾವು: ಅಳ್ಳಾಲಸಂದ್ರ ರೈಲ್ವೆ ಗೇಟ್ ಬಳಿ ಸುಮಾರು 50 ವರ್ಷದ ಮಹಿಳೆ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದು, ಹೆಸರು, ವಿಳಾಸ ತಿಳಿದುಬಂದಿಲ್ಲ.  ಕ್ರೀಂ ಬಣ್ಣದ ಸೀರೆ, ಕಪ್ಪು ಬಣ್ಣದ ರವಿಕೆ ಧರಿಸಿರುವ ಈ ಮಹಿಳೆ ನಿನ್ನೆ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ.  ಶವವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ವಡ್ಡರಹಳ್ಳಿ ಸಮೀಪ ಸುಮಾರು 55 ವರ್ಷದ ಮಹಿಳೆ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದು ಹೆಸರು ವಿಳಾಸ ತಿಳಿದುಬಂದಿಲ್ಲ. ಶವವನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದ್ದು, ವಾರಸುದಾರರು ಕೂಡಲೇ ಯಶವಂತಪುರ ರೈಲ್ವ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.
► Follow us on –  Facebook / Twitter  / Google+

 

Facebook Comments

Sri Raghav

Admin