ಪ್ರಥಮವಾಗಿ ಏರ್ ಆಂಬ್ಯೂಲೆನ್ಸ್ ಸದಸ್ಯತ್ವ ಪಡೆದ ತುರುವೇಕೆರೆಯ ಇಂಡಿಯನ್ ಪಬ್ಲಿಕ್ ಶಾಲೆ

ಈ ಸುದ್ದಿಯನ್ನು ಶೇರ್ ಮಾಡಿ

Air-Amulence--01

ತುರುವೇಕೆರೆ, ಜು.13- ಭಾರತದಲ್ಲಿ ಪ್ರಥಮ ಬಾರಿಗೆ ತುರ್ತ ಸೇವೆಗಳಿಗಾಗಿ ಏರ್ ಆಂಬ್ಯೂಲೆನ್ಸ್ ಹೆಲಿಕಾಪ್ಟರ್ ಸೇವೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗಿದ್ದು, ತುರುವೇಕೆರೆ ಇಂಡಿಯನ್ ಪಬ್ಲಿಕ್ ಶಾಲೆಯು ಇದರ ಸೇವೆಯನ್ನು ಪಡೆಯಲು ಸದಸ್ಯತ್ವ ಪಡೆದ ರಾಜ್ಯದ ಮೊದಲ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಏವಿಯೇಟರ್ ಕಂಪನಿಯ ಮಧುಮಿತ್ರ ತಿಳಿಸಿದರು. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಏವಿಯೇಟರ್ ಪ್ರೆಸ್‍ಕ್ಯೂಬ್ ಕಂಪವಿಯ ಕ್ಯಾಪ್ಟನ್ ಅರುಣ್ ಶರ್ಮಾ ಅವರು ಕಳೆದ 6 ತಿಂಗಳ ಹಿಂದೆ ಏರ್ ಆಂಬ್ಯೂಲೆನ್ಸ್ ಹೆಲಿಕಾಪ್ಟರ್ ಸೇವೆಯನ್ನು ಕರ್ನಾಟಕ, ಕೇರಳ, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಆರಂಭಿಸಿದೆ. ಇದರ ಸದಸ್ಯತ್ವದ ಹಣ 3000 ರೂ.ಗಳಾಗಿದ್ದು, ಸದಸ್ಯತ್ವ ಹೊಂದಿದ ವ್ಯಕ್ತಿಗೆ ಒಂದು ಐಡಿ ನಂಬರ್ ಕೊಡಲಾಗುವುದು ಎಂದರು.

ಒಂದು ವರ್ಷದಲ್ಲಿ 5 ಗಂಟೆಯ ಸೇವೆಯನ್ನು ಪಡೆಯಬಹುದಾಗಿದೆ. ಹೃದಯಘಾತ, ಹೃದಯ ಜೊಡಣೆ, ಅಪಘಾತ, ಹಾಗೂ ಇನ್ನಿತರ ತುರ್ತು ಗಂಭೀರ ಸಮಯದಲ್ಲಿ ಬೆಂಗಳೂರು ಹಾಗೂ ಇನ್ನಿತರ ರಾಜ್ಯಗಳಲ್ಲಿ ಚಿಕಿತ್ಸೆ ಪಡೆಯಲು ಈ ಸೇವೆ ಬಳಸಿಕೊಳ್ಳ ಬಹುದಾಗಿದೆ. ಈ ಏರ್ ಆಂಬ್ಯೂಲ್ಸ್‍ನಲ್ಲಿ ತುರ್ತು ಚಿಕಿತ್ಸೆಗೆ ಬೇಕಾದ ಐಸಿಯು ಘಟಕ, ಡಾಕ್ಟರ್, ಔಷಧಿಗಳ ಸೌಲಭ್ಯವಿದೆ. ಸದಸ್ಯತ್ವ ಪಡೆದ ವ್ಯಕ್ತಿಗೆ ಅಪಘಾತ ಅಥವಾ ತುರ್ತು ಸಂದರ್ಭದಲ್ಲಿ 155350 ಈ ಟೋಲ್ ನಂಬರ್‍ಗೆ ಕರೆ ಮಾಡಿದರೆ ವ್ಯಕ್ತಿಯ ಸ್ಥಳದ ವಿವರ ಪಡೆದು ಸ್ಥಳೀಯ ಆಂಬ್ಯೂಲೆನ್ಸ್ ಸಹಾಯದಿಂದ ನಮ್ಮ ಎರ್‍ಆಂಬ್ಯೂಲೆನ್ಸ್‍ಗೆ ರೋಗಿಯನ್ನು ಸ್ಥಳಾಂತರಿಸಿ ಅವರಿಗೆ ಬೇಕಾದ ಆಸ್ಪತ್ರೆಗಳಿಗೆ ತಲುಪಿಸಲಾಗುವುದು ಎಂದು ವಿವರಿಸಿದರು.
ಐಪಿಎಸ್ ಶಾಲೆಯ ಆಡಳಿತಧಿಕಾರಿ ರುದ್ರಯ್ಯ ಹಿರೇಮಠ್ ಸುದ್ದಿಗೋಷ್ಠಿಯಲ್ಲಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin