ಪ್ರಥಮ ಜನಸಂಪರ್ಕ ಸಭೆಗೆ 395 ಅರ್ಜಿ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

TB-Jayachandra-Minister

ತುಮಕೂರು, ಆ.9- ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಯಶಸ್ವಿಯಾಗಿ ನೆರವೇರಿತು. ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಗೆ ಕಂದಾಯ, ತುಮಕೂರು ನಗರಪಾಲಿಕೆ, ಜಿಪಂ ಸೇರಿದಂತೆ ವಿವಿಧ ಇಲಾಖೆಗೆ ಸುಮಾರು 395ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಮೊದಲಿಗೆ ಇಲಾಖಾವಾರು ವಿಂಗಡಿಸಿ ಕ್ರಮ ಸಂಖ್ಯೆಯನ್ವಯ ಅರ್ಜಿದಾರರನ್ನು ವೇದಿಕೆಗೆ ಕರೆದು ಅವರ ಸಮಸ್ಯೆ ಆಲಿಸಿ ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜನ ಸಂಪರ್ಕ ಸಭೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನಿಂದ-26, ಗುಬ್ಬಿ-45, ಕುಣಿಗಲ್-18, ಕೊರಟಗೆರೆ-15, ಮಧುಗಿರಿ-23, ಪಾವಗಡ-17, ಶಿರಾ-54, ತಿಪಟೂರು-11, ತುಮಕೂರು-178 ಹಾಗೂ ತುರುವೆಕೆರೆ-8 ಒಟ್ಟು 395 ಅಹವಾಲು ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಿಲಾಗಿದೆ.ಸದರಿ ಅಹವಾಲು ಅರ್ಜಿಗಳನ್ನು ಮುಂದಿನ ಜನಸಂಪರ್ಕ ಸಭೆಯ ಹೊತ್ತಿಗೆ ವಿಲೇವಾರಿ ಮಾಡಲು ಪ್ರಮಾಣಿಕ ಪ್ರಯತ್ನ ಮಾಡಬೇಕು. ಮುಂದಿನ ಜನಸಂಪರ್ಕ ಸಭೆ ದಿನಾಂಕ ಪ್ರಕಟಿಸಲಾಗುವುದು ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.
ಶಾಸಕರಿಂದ ಅರ್ಜಿ ಸಲ್ಲಿಕೆ: ಕ್ಷೇತ್ರದ ಜನರ ಪರವಾಗಿ ಜನಸಂಪರ್ಕ ಸಭೆಗೆ ಆಗಮಿಸಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‍ಗೌಡ, ಆಯೋಜಕರು ವೇದಿಕೆಗೆ ಕರೆದರೂ ಹೋಗದೆ ಜನಸಾಮಾನ್ಯರಂತೆ ಸಚಿವರಿಗೆ ಅರ್ಜಿ ಸಲ್ಲಿಸಿದರು.ಸರ್ಕಾರ ಕಂದಾಯ ಕಾಯ್ದೆ 94 ಸಿಸಿಗೆ ತಿದ್ದುಪಡಿ ತಂದು ಸರ್ಕಾರಿ ಭೂಮಿಯಲ್ಲಿ ಈಗಾಗಲೇ ಕಟ್ಟಿರುವ ಮನೆಗಳ ಸಕ್ರಮಕ್ಕೆ ಸಂಬಂಧಿಸಿದಂತೆ ತೀರ ವಿಳಂಬವಾಗುತ್ತಿದೆ. ತಾಲೂಕು ಕಚೇರಿಯಲ್ಲಿ ಅರ್ಜಿ ಪಡೆಯುವವರಿಲ್ಲ.

ಅಲ್ಲದೆ, ನಗರದಲ್ಲಿ 20×30  ಮತ್ತು ಗ್ರಾಮೀಣ ಪ್ರದೇಶದಲ್ಲಿ 3್ಡ040 ಎಂದು ಜಾಗ ನಿಗದಿಮಾಡಿದ್ದು, ಇದು ಅವೈಜ್ಞಾನಿವಾಗಿದೆ . ಇದನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು. ಜನಸಂಪರ್ಕ ಸಭೆಯಲ್ಲಿ ಶಾಸಕ ಡಾ.ರಫೀಕ್ ಅಹಮ್ಮದ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್, ಎಸ್.ಪಿ.ಕಾರ್ತಿಕರೆಡ್ಡಿ, ಸಿಇಒ ಕೆ.ಜೆ.ಶಾಂತಾರಾಮ ಹಾಗೂ ಜಿಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Facebook Comments

Sri Raghav

Admin