ಪ್ರಥಮ ಮಹಾ ಸಂಗ್ರಾಮದ ಬಂಕರ್ ತೋಡಿದ ಫ್ರೆಂಚ್ ವಿದ್ಯಾರ್ಥಿಗಳು

ಈ ಸುದ್ದಿಯನ್ನು ಶೇರ್ ಮಾಡಿ

first-world-war
ಫ್ರೆಂಚ್ ಹೈಸ್ಕೂಲ್ ವಿದ್ಯಾರ್ಥಿಗಳ ಗುಂಪೊಂದು  ಪ್ರಥಮ ಮಹಾ ಯುದ್ಧದ ಮಾದರಿಯ ಕಂದಕ ವೊಂದನ್ನು ತೋಡಿದ್ದಾರೆ. ತೀವ್ರ ಶೀತದ ವಾತಾವರಣ ಮತ್ತು ಮಳೆಯನ್ನೂ ಲೆಕ್ಕಿಸದೇ ಕಂದಕದೊಳಗೆ ಇಡೀ ರಾತ್ರಿ ಕಳೆದ ವಿದ್ಯಾರ್ಥಿಗಳ ಮೇಲೆ ಅವರ ಶಿಕ್ಷಕರು ಅಚ್ಚರಿ ರೀತಿಯಲ್ಲಿ ದಾಳಿ ಮಾಡಿದರು. ಈ ಅಣಕುರಣರಂಗದ ಸುತ್ತ ಒಂದು ಸುತ್ತು..!

ಒಂದನೇ ವಿಶ್ವ ಯುದ್ದದಲ್ಲಿ ಯೋಧನೊಬ್ಬನ ಜೀವನ ವನ್ನು ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವಂತೆ ಮಾಡಲು ವಿನ್ಯಾಸಗೊಳಿಸಲಾದ ಈ ಸಾಹಸ ತರಬೇತಿ ಕಾರ್ಯಾಚರಣೆಯಲ್ಲಿ ಲೇ ಮ್ಯಾನ್ಸ್‍ನ ಅನ್ನಿ ಫ್ರಾಂಕ್ ಹೈಸ್ಕೂಲ್ ವಿದ್ಯಾರ್ಥಿಗಳು ಪಾಲ್ಗೊಂಡರು. ಮೊದಲು 1.6 ಮೀಟರ್ ಆಳ ಮತ್ತು 90 ಸೆಂ.ಮೀ.ಅಗಲದ ಐತಿಹಾಸಿಕ ನಿಖರ ಕಂದಕವೊಂದು ತೊಡಿದರು. ಇದರಲ್ಲಿ ಮರದ ಪಕ್ಕೆಗಳಿದ್ದು, ಕಂದಕದ ಹಿಂದೆ ಅವಿತು ಕುಳಿತುಕೊಳ್ಳಲು ಒಂದು ಅಡಗುತಾಣವೂ ಇತ್ತು.ರಾತ್ರಿ ಉರುಳಿದಂತೆ, ಶಾಲೆಯ ಮೂವರು “ತುಕಡಿಗಳು” ಆರು ಡಿಗ್ರಿ ಉಷ್ಣಾಂಶವನ್ನು ಲೆಕ್ಕಿಸದೇ ಈ ಕಾರ್ಯಾಚರಣೆಗೆ ಇಳಿದವು. ಅವರು ಆತಂಕ ಮತ್ತು ಸವಾಲುಗಳನ್ನು ಎದುರಿಸಲು ಅನುಕೂಲವಾಗುವಂತೆ ಅವರನ್ನು ಸಂಪೂರ್ಣ ಕಗ್ಗತ್ತಲ್ಲಿ ಇರಿಸಲಾಗಿತ್ತು.  “ಇದು ತುಂಬಾ ಕೆಟ್ಟದಾಗೇನೂ ಇರಲಿಲ್ಲ. ಇದು ಒಳ್ಳೆಯ ಸಾಹಸವಾಗಿತ್ತು. ಆರಂಭದಲ್ಲಿ ತುಂಬಾ ಶೀತದ ವಾತಾವರಣವಿತ್ತು. ಫ್ರಾನ್ಸ್ ಮೇಲೆ ಜರ್ಮನ್ ಆಕ್ರಮಣದ ಬಗ್ಗೆ ನಮಗೆ ತುಂಬಾ ಕುತೂಹಲವಿತ್ತು. ಜರ್ಮನ್ ಯೋಧರ ಗ್ಯಾಸ್ ಆಟ್ಯಾಕ್ ಬಗ್ಗೆಯೂ ತಿಳಿದುಕೊಳ್ಳುವ ಆಸಕ್ತಿ ಇತ್ತು” ಎಂದು ವಿವರಿಸಿದ ಶಾಲಾ ವಿದ್ಯಾರ್ಥಿ ಎರ್ವಿನ್.

ಈ ಸಮರಾಭ್ಯಾಸದ ಅಣಕು ತರಬೇತಿಯಲ್ಲಿ ಸಾಧ್ಯವಾದಷ್ಟೂ ವಾಸ್ತವತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆಕ್ರಮಣಗಳು ನೈಜ್ಯವೇನೋ ಎಂಬಂತೆ ಸೃಷ್ಟಿಸಲಾಗಿತ್ತು. ಬಂದೂಕುಗಳ ಗುಂಡಿನ ಮೊರೆತಗಳು ಮತ್ತು ಆಸ್ಫೋಟಗಳು ಧ್ವನಿವರ್ಧಕಗಳಲ್ಲಿ ಮೊಳಗಿದವು. ಅನಿಲ ಆಕ್ರಮಣದ ಪ್ರತಿರೂಪವನ್ನು ಧೂಮಯಂತ್ರದ ಮೂಲಕ ಮರು ಸೃಷ್ಟಿಸಲಾಗಿತ್ತು. ಅಣಕು ಗ್ರೆನೇಡ್‍ಗಳಾಗಿ ಶಿಕ್ಷಕರು ಪಟಾಕಿಗಳು ಮತ್ತು ಸಿಡಿಮದ್ದುಗಳನ್ನು ಕಂದಕದೊಳಗೆ ಎಸೆದರು.
ನಂತರ ರಾತ್ರಿ, ವಿದ್ಯಾರ್ಥಿಗಳು ಗಾಯಗೊಂಡ ಸೈನಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಹಾಗೂ ವೈರಿ ಪಡೆಯ ವಶದಲ್ಲಿರುವ ಯುದ್ಧ ಕೈದಿಗಳನ್ನು ಪಾರು ಮಾಡುವ ಅಣಕು ಕಾರ್ಯಾಚರಣೆ ನಡೆಸಿದರು.

ಈ ಅಣಕು ಸಮರ ಕಾರ್ಯಾಚರಣೆಯಲ್ಲಿ 18 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವಿದ್ಯಾರ್ಥಿ ಗಳನ್ನು ತಲಾ ಆರು ಜನರ ಮೂರು ರೆಜಿಮೆಂಟ್‍ಗಳಾಗಿ ವಿಂಗಡಿಸಿ ಕಂದಕದಲ್ಲಿ ಎರಡು ಪಾಳಿಗಳಲ್ಲಿ ಪುನರಾವರ್ತಿಸಲಾಯಿತು.  ಲಘು ವಿರಾಮ ಕಾಲದಲ್ಲಿ ಕಾರ್ಡ್ ಗೇಮ್‍ಗಳನ್ನು ಆಡಲು, ನಿಯತಕಾಲಿಕಗಳನ್ನು ಓದಲು ಹಾಗೂ ಯುದ್ಧ ಗೀತೆಗಳನ್ನು ಹಾಡಲು ಅವರಿಗೆ ಸಮಯಾವಕಾಶ ನೀಡಲಾಗಿತ್ತು. ಇವರ ಹಾಸಿಗೆಗಳೂ ಕೂಡಿ ಸಾಧ್ಯವಾದಷ್ಟೂ ಸೈನಿಕರು ಬಳಸುವ ಹಾಸಿಗೆಗಳಂತೆ ಇದ್ದವು. ನೆಲದ ಮೇಲೆ ತೆಳು ಪದರದ ಸ್ಲೀಪಿಂಗ್ ಬ್ಯಾಗ್‍ಗಳನ್ನು ನೀಡಲಾಗಿತ್ತು.  ಜುಲೈ 2016ಕ್ಕೆ ಪ್ರಥಮ ವಿಶ್ವ ಯುದ್ಧ ಆರಂಭಗೊಂಡು 102 ವರ್ಷಗಳು. ಈ ಮಹಾ ಸಮರ ಬಹುತೇಕ ಫ್ರೆಂಚ್ ಭೂಮಿಯಲ್ಲೇ ನಡೆದಿದೆ.

ಇದೇ ಸಂದರ್ಭದಲ್ಲಿ ಫ್ರೆಂಚ್ ವಿದ್ಯಾರ್ಥಿಗಳು ಅಣಕು ಯುದ್ಧ ಕಾರ್ಯಾಚರಣೆಯಲ್ಲಿ ಕಂದಕ ತೋಡಿದ್ದು ಕಾಕತಾಳೀಯವಾಗಿತ್ತು. ಒಂದನೇ ಮಹಾ ಸಮರ ಪ್ರಾರಂಭಗೊಂಡ ಬಳಿಕ ಹಲವಾರು ತಿಂಗಳ ನಂತರ ಸೇನಾಪಡೆಗಳು ಬೃಹತ್ ಮುಂಚೂಣಿಯನ್ನು ನಿಲ್ಲಿಸಿ, ಚಳಿಗಾಲದಲ್ಲಿ ರಕ್ಷಣೆ ಪಡೆಯಲು ಕಂದಕ ತೊಡಲು ಆರಂಭಿಸಿದ್ದು ಕೂಡ ಇದೇ ಸಮಯದಲ್ಲಿ. ಪ್ರಥಮ ವಿಶ್ವ ಯುದ್ಧದ ವೇಳೆ 8.4 ದಶಲಕ್ಷ ಫ್ರೆಂಚ್ ಯೋಧರು ರಣರಂಗದಲ್ಲಿ ಸೆಣಸಿದರು. 1.3 ದಶಲಕ್ಷ ಸೈನಿಕರು ಕಾದಾಟದಲ್ಲಿ ಮಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin