ಪ್ರಧಾನಿಗೆ ಅವಮಾನ : ಸೋಶಿಯಲ್ ಮೀಡಿಯಾದಲ್ಲಿ ಪಿಗ್ಗಿಗೆ ಹಿಗ್ಗಾ ಮುಗ್ಗಾ ಕ್ಲಾಸ್

ಈ ಸುದ್ದಿಯನ್ನು ಶೇರ್ ಮಾಡಿ

Priyanka-Chopra

ನವದೆಹಲಿ/ಬರ್ಲಿನ್, ಮೇ 31-ಕ್ವಾಂಟಿಕೋ ಟೆಲಿವಿಷನ್ ಸರಣಿ ಮತ್ತು ಬೇವಾಚ್ ಸಿನಿಮಾ ಮೂಲಿಕ ವಿದೇಶಗಳಲ್ಲೂ ಉತ್ತಮ ಹೆಸರು ಗಳಿಸಿರುವ ಪ್ರಿಯಾಂಕ ಚೋಪಾರ ತನ್ನ ನಟನೆ ಮತ್ತು ಪ್ರತಿಭೆಯಿಂದ ಅಂತಾರಾಷ್ಟ್ರೀಯ ಖ್ಯಾತಿಯ ತಾರೆಯೂ ಆಗಿದ್ದಾರೆ. ಆ ಮೂಲಕ ಅಭಿಮಾನಿಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದ್ದಾರೆ.   ಬೇವಾಚ್ ಚಿತ್ರದ ಪ್ರಚಾರಕ್ಕಾಗಿ ಬರ್ಲಿನ್‍ನಲ್ಲಿದ್ದ ಪಿಂಕಿ ವಿದೇಶಿ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಮೋದಿ ಜೊತೆ ಕಾಲುಗಳು ಧಾರಾಳವಾಗಿ ಕಾಣುವ ಲಂಗ ಧರಿಸಿ ಕುಳಿತಿದ್ದ ಈಕೆಯ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಗೊಂಡು ವಿವಾದಕ್ಕೂ ಗುರಿಯಾಗಿದೆ.ದೇಶದ ಪ್ರಧಾನಿ ಮುಂದೆ ಕಾಲು ಕಾಣಿಸುವಂತೆ ಕುಳಿತುಕೊಳ್ಳುವ ಮೂಲಕ ಪಿಂಕಿ ಅಗೌರವ ಸಲ್ಲಿಸಿದ್ದಾರೆ ಎಂಬ ಟೀಕೆಗಳು ಸೋಷಿಯಲ್ ಮೀಡಿಯಾದಲ್ಲಿ ಸರಿಮಳೆಯಾಗಿವೆ. ಆದರೆ ಈ ಟೀಕೆ ಟಿಪ್ಪಣಿಗಳಿಗೆ ಪಿಗ್ಗಿ ಕ್ಯಾರೆ ಎನ್ನಲಿಲ್ಲ.   ನನ್ನ ಮತ್ತು ಪ್ರಧಾನಮಂತ್ರಿಜೀ ಅವರ ಭೇಟಿ ಒಂದು ಉತ್ತಮ ಕಾಕತಾಳೀಯ ಎಂದು ಹೇಳಿದ್ದಾರೆ. ಅಲ್ಲದೇ ಇನ್ಸ್‍ಟಾಗ್ರಾಮ್‍ನಲ್ಲಿ ಈ ಫೋಟೋವನ್ನೇ ನೆಪವಾಗಿಟ್ಟುಕೊಂಡು ಕಾಲೆಳೆಯುತ್ತಿರುವ ಮಂದಿಗೆ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin