ಪ್ರಧಾನಿಯವರನ್ನು ಭೇಟಿ ಮಾಡಿದ ಬಿಜೆಪಿ ಕಾರ್ಯಕರ್ತ

ಈ ಸುದ್ದಿಯನ್ನು ಶೇರ್ ಮಾಡಿ

BJP-Worker

ಬೆಂಗಳೂರು, ಮೇ 22-ಪ್ರಧಾನಿ ಮೋದಿ ಅವರ ಭೇಟಿಗೆ ಅವಕಾಶ ದೊರೆತಿದ್ದು, ನಮ್ಮ ಜೀವಮಾನದ ಅತೀ ಸಂತಸದ ದಿನಗಳಲ್ಲಿ ಒಂದು ಎಂದು ರಾಜ್ಯ ಬಿಜೆಪಿ ಕಾರ್ಯಕರ್ತ ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.  ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಕರ್ನಾಟಕ ಬಿಜೆಪಿ ಕಾರ್ಯಕರ್ತ ರಾಘವೇಂದ್ರ ಭೇಟಿ ಮಾಡಿ ಬಂದಿದ್ದು, ಈ ಸಂಬಂಧ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.  ರಾಷ್ಟ್ರದ ಪ್ರಮುಖ ಯೋಜನೆಗಳಾದ ಬೇಟಿ ಬಚಾವೋ, ಬೇಟಿ ಪಡಾವೋ, ಸ್ವಚ್ಛ ಭಾರತ್ ಹಾಗೂ ಸ್ಕಿಲ್ ಡೆವಲಪ್‍ಮೆಂಟ್‍ನಂತಹ ಕಾರ್ಯಕ್ರಮಗಳು ಪ್ರತಿಯೊಬ್ಬ ಭಾರತೀಯ ಹಾಗೂ ಪ್ರತಿ ಕುಟುಂಬಕ್ಕೂ ಅಗತ್ಯವಾಗಿರುವ ಕಾರ್ಯಕ್ರಮಗಳಾಗಿದೆ. ಈ ಕಾರಣಕ್ಕಾಗಿಯೇ ತಾವು ಬೇರೆ ರಾಜಕೀಯ ಪಕ್ಷವನ್ನು ತೊರೆದು ಬಿಜೆಪಿಯತ್ತ ಒಲವು ತೋರಿದ್ದಾಗಿ ತಿಳಿಸಿದ್ದೇನೆ ಎಂದಿದ್ದಾರೆ.ವಿಐಪಿ ಸಂಸ್ಕøತಿಗೆ ವಿದಾಯ ಹೇಳಿ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಪ್ರಮುಖ ಎಂಬುದನ್ನು ಸಾರುತ್ತಿರುವುದು ಶ್ಲಾಘನೀಯ ಎಂಬ ತಮ್ಮ ಅಭಿಪ್ರಾಯಕ್ಕೆ ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.  ಇದೇ ವೇಳೆ ನಾನು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನಾಗಿ ನಿರ್ದೇಶಕನಾಗಿದ್ದ ಅವಧಿಯಲ್ಲಿ ಸುಮಾರು 17 ಲಕ್ಷ ಜನ್‍ಧನ್ ಯೋಜನೆಯ ಖಾತೆಗಳನ್ನು ತೆರೆಯಿಸಿ, ಲಕ್ಷಾಂತರ ಜನರಿಗೆ ಬಾಕಿ ಇರುವ ಜೀವವಿಮೆ ಹಣವನ್ನು ಹಿಂದಿರುಗಿಸಲು ಕ್ರಮಕೈಗೊಂಡಿದ್ದ ಬಗ್ಗೆಯೂ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಟ್ಟೆ. ಜೊತೆಗೆ ಇನ್ನಷ್ಟು ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದೆ ಎಂದು ಹೇಳಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin