ಮೋದಿ ಭಾಷಣದ ಕಂಪ್ಲೀಟ್ ಹೈಲೈಟ್ಸ್ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Modi-01

ನವದೆಹಲಿ.ಡಿ.31 : ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ
ದೇಶವನ್ನುದ್ದೇಶಿಸಿ ಮಾತನಾಡಿದ್ದು, ದೇಶದ ದಲಿತ, ಮಹಿಳೆಯರು, ರೈತರು, ಹಿರಿಯ ನಾಗರಿಕರಿಗೆ ಹಲವಾರು ಯೋಜನೆಗಳನ್ನು ಘೋಷಿಸುವ ಮೂಲಕ ಹೊಸ ವರ್ಷದ ಗಿಫ್ಟ್ ನೀಡಿದ್ದಾರೆ.

ಹೊಸ ವರುಷವನ್ನು ಹೊಸ ಕನಸಿನೊಂದಿಗೆ ಆರಂಭಿಸೋಣ ಎಂದು ಹೇಳುವ ಮೂಲಕ ಭಾಷಣವನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ನಿರ್ಧಾರವನ್ನು ಬೆಂಬಲಿಸಿದ ದೇಶದ ಜನತೆಗೆ ಮತ್ತು ಹಗಲು ರಾತ್ರಯೆನ್ನದೇ ದುಡಿದ ಬ್ಯಾಂಕ್ ಸಿಬ್ಬಂಧಿಗೆ ಧನ್ಯವಾದ ಹೇಳಿದರು. ದೀಪಾವಳಿಯ ನಂತರ ಕಪ್ಪು ಹಣದ ವಿರುದ್ಧ ಹೋರಾಡಲು ದೇಶಕ್ಕೆ ದೇಶವೇ ಮಹತ್ತರವಾದ ನಿರ್ಧಾರವೊಂದನ್ನು ಕೈಗೊಂಡಿತ್ತು. ಈ ನಿರ್ಧಾರಕ್ಕೆ ಜನರು ಉಹಿಸಲಾಗದಷ್ಟು ರೀತಿಯಲ್ಲಿ ಬೆಂಬಲ ನೀಡಿದ್ದು, ಅವರು ಮಾಡಿದ ತ್ಯಾಗಗಳು ಮುಂದಿನ ದಿನಗಳಲ್ಲಿ ಫಲ ನೀಡಲಿವೆ. ನೋಟ್ ಬ್ಯಾನ್ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಉತ್ತಮ ಫಲ ಸಿಗಲಿದೆ ಎಂದರು. ದೇಶದ ಅಭಿವೃದ್ಧಿಗಾಗಿ ಜನರು ಸಹಿಸಿಕೊಂಡ ಕಷ್ಟಗಳೇ ಇದಕ್ಕೆ ಸಾಕ್ಷಿ, ದೇಶದ ಅಭಿವೃದ್ಧಿಗಾಗಿ ಜನರು ಸಹಿಸಿಕೊಂಡ ಕಷ್ಟಗಳೇ ಇದಕ್ಕೆ ಸಾಕ್ಷಿ ಎಂದರು.

ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಜನರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ. ಆದರೆ ತಮ್ಮೆಲ್ಲಾ ನೋವುಗಳನ್ನು ಸಹಿಸಿಕೊಂಡು ಅವರು ನಮಗೆ ಬೆಂಬಲ ನೀಡಿದ್ದಾರೆ. ಆದಷ್ಟು ಬೇಗ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಸಹಜ ಸ್ಥಿತಿಗೆ ಬರುವಂತೆ ಮಾಡುತ್ತೇವೆ. ಜನರ ಕಷ್ಟಗಳಿಗೆ ಶೀಘ್ರವೇ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

• ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ಹೊಸ ಮನೆ ನಿರ್ಮಾಣಕ್ಕೆ ಯೋಜನೆ, ನಗರ ಪ್ರದೇಶದಲ್ಲಿ ಶೇ.4ರಷ್ಟು ಬಡ್ಡಿ ದರದಂತೆ 9 ಲಕ್ಷ ರೂಪಾಯಿವರೆಗೂ ಸಾಲ. ಮನೆ ನಿರ್ಮಾಣ, ನವೀಕರಣಕ್ಕೆ ಶೇ.3ರಷ್ಟು ಬಡ್ಡಿ ದರ ಕಡಿತ

• ಸಹಕಾರಿ ಬ್ಯಾಂಕ್ ಗಳ ಮೂಲಕ ಮೂರು ಕೋಟಿ ರೈತರಿಗೆ ಕಿಸಾನ್ ಕಾರ್ಡ್ ಬದಲು ರುಪೇ ಕಾರ್ಡ್ ವಿತರಣೆ

• ರೈತರ ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದ ಸಾಲದ ಶೇ.60ರಷ್ಟು ಬಡ್ಡಿ ಮನ್ನಾ.

ಗರ್ಭಿಣಿಯರ ಆರೈಕೆಗಾಗಿ 6 ಸಾವಿರ ರೂಪಾಯಿ ಸಹಾಯಧನ : ಗರ್ಭವತಿಯರಿಗೆ ವಿಶೇಷ ಯೋಜನೆ ಘೋಷಣೆ ಮಾಡಿದ ಪ್ರಧಾನಿ ಗರ್ಭಿಣಿಯರ ಪೌಷ್ಟಿಕ ಆಹಾರಕ್ಕಾಗಿ 6000 ರೂ. ಆರ್ಥಿಕ ಸಹಾಯ ನೀಡುತ್ತೇವೆ. ಇದನ್ನು ನೇರವಾಗಿ ಅವರ ಬ್ಯಾಂಕ್ ಅಕೌಂಟಿಗೆ ವರ್ಗಾವಣೆ ಮಾಡಲಾಗುವುದು ಎಂದಿದ್ದಾರೆ.
• ಸಣ್ಣ ವರ್ತಕರಿಗೆ ಬ್ಯಾಂಕ್ ಗಳಿಂದ ನೀಡಲಾಗುವ ಸಾಲಕ್ಕೆ ಕೇಂದ್ರವೇ ಸರಕಾರವೇ ಗ್ಯಾರಂಟಿ ನೀಡುತ್ತದೆ. ಅವರಿಗೆ ನೀಡುವ ಸಾಲವನ್ನು ಶೇ.20ರಿಂದ ಶೇ.25ಕ್ಕೆ ಏರಿಸಲಾಗುವುದು.

ಹಿರಿಯ ನಾಗರಿಕರಿಗೆ ಹೊಸ ಯೋಜನೆ : ಬ್ಯಾಂಕ್ ನಲ್ಲಿ 7.5 ಲಕ್ಷ ರುಪಾಯಿವರೆಗೆ ಹಿರಿಯರು 10 ವರ್ಷಗಳವರೆಗೆ ಹಣ ಠೇವಣಿ ಇಟ್ಟರೆ 8ರಷ್ಟು ಬಡ್ಡಿ

• ಸಹಕಾರಿ ಬ್ಯಾಂಕ್ ಗಳಲ್ಲಿ ರೈತರಿಗೆ ಬಂಪರ್ ಕೊಡುಗೆ. ರುಪೇ ಕಾರ್ಡ್ ಬಳಸಿ ಖರೀದಿಗೆ ಅವಕಾಶ ನೀಡಲಾಗುವುದು,. ಮುಂದಿನ ಮೂರು ದಿನಗಳಲ್ಲಿ 3 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ರುಪೇ ಕಾರ್ಡ್ ಆಗಿ ಬದಲಾಯಿಸಲಾಗುವುದು.

• ಗ್ರಾಮೀಣ ಪ್ರದೇಶದಲ್ಲಿ ಬಡವರು, ಕೆಳಮಧ್ಯಮ ಮತ್ತು ಮಧ್ಯಮ ವರ್ಗದವರು ಹೊಸ ಮನೆ ಕೊಳ್ಳಲು 12 ಲಕ್ಷ ರು. ಸಾಲ ತೆಗೆದುಕೊಂಡವರಿಗೆ 3 ಪ್ರತಿಶತದಷ್ಟು ಬಡ್ಡಿಯಲ್ಲಿ ರಿಯಾಯಿತಿ ದೊರೆಯಲಿದೆ.

• ಈ ಸರಕಾರ ಸಜ್ಜನರ ಪರವಾಗಿದೆ ಮತ್ತು ದುರ್ಜನರು ಸರಿದಾರಿಗೆ ತರಲು ಉಪಯುಕ್ತ ವಾತಾವರಣವನ್ನು ಸೃಷ್ಟಿ

ನಿರಂತರ ಸುದ್ದಿಗಳಿಗಾಗಿ Eesanje News 24/7 ನ್ಯೂಸ್ ಆ್ಯಪ್  ಡೌನ್ಲೋಡ್ ಮಾಡಿಕೊಳ್ಳಿ  :    Click Here to Download 

Facebook Comments

Sri Raghav

Admin