ಪ್ರಧಾನಿ ಬಳಿಗೆ ಕೇಂದ್ರ ಸಚಿವ ಅನಂತ್‍ಕುಮಾರ್ ದೌಡು

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar

ಬೆಂಗಳೂರು ಅ.3-ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ತಡೆಗಟ್ಟುವ ಕೊನೆಯ ಪ್ರಯತ್ನವಾಗಿ ಕೇಂದ್ರ ಸಚಿವ ಅನಂತ್‍ಕುಮಾರ್ ಪ್ರಧಾನಿ ಬಳಿ ದೌಡಾಯಿಸಿದ್ದಾರೆ.
ಈಗಾಗಲೇ ತಮಿಳುನಾಡು, ಪುದುಚೇರಿ ರಾಜ್ಯಗಳು ನಿರ್ವಹಣಾ ಮಂಡಳಿ ರಚನೆಗೆ ತಮ್ಮ ರಾಜ್ಯಗಳ ಪ್ರತಿನಿಧಿಗಳ ಹೆಸರನ್ನು ಕೇಂದ್ರದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿಗೆ ತಿಳಿಸಿದ್ದಾರೆ. ಆದರೆ ಕರ್ನಾಟಕ ಮಾತ್ರ ನಿರ್ವಹಣಾ ಮಂಡಳಿ ರಚನೆಗೆ ಅಪಸ್ವರ ತೆಗೆದಿದೆ. ಯಾವುದೇ ಕಾರಣಕ್ಕೂ ಮಂಡಳಿ ರಚಿಸಬಾರದೆಂದು ಈಗಾಗಲೇ ತಮ್ಮ ಅಭಿಪ್ರಾಯವನ್ನು ಹೊರಹಾಕಿದೆ. ಸುಪ್ರೀಂಕೋರ್ಟ್‍ಗೆ ನಿರ್ವಹಣಾ ಮಂಡಳಿಯ ಸದಸ್ಯರ ಹೆಸರಗಳನ್ನು ಅಟಾರ್ನಿ ಜನರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಕಾರಣ ಸದ್ಯಕ್ಕೆ ತಡೆಹಿಡಿಯುವಂತೆ ಅನಂತ್‍ಕುಮಾರ್ ಪ್ರಧಾನಿ ಮೋದಿಯವರ ಬಳಿ ಮನವಿ ಮಾಡಲಿದ್ದಾರೆ.

ಮಧ್ಯಾಹ್ನದ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿರುವ ಅನಂತ್‍ಕುಮಾರ್, ಪ್ರಸ್ತುತ ರಾಜ್ಯದಲ್ಲಿ ಕಾವೇರಿ ಬಿಕ್ಕಟ್ಟುಕುರಿತಂತೆ ಉಂಟಾಗಿರುವ ಸಮಸ್ಯೆಯನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡುವರು. ಈಗಾಗಲೇ ಸ್ವತಃ ಪ್ರಧಾನಿ ಕೇಂದ್ರದ ಹಿರಿಯ ಸಚಿವರಾದ ರಾಜ್‍ನಾಥ್‍ಸಿಂಗ್, ಸುಷ್ಮಾಸ್ವರಾಜ್, ಅರುಣ್‍ಜೇಟ್ಲಿ ಮತ್ತಿತರ ಜೊತೆ ಕಾವೇರಿ ಬಿಕ್ಕಟ್ಟು ಕುರಿತಂತೆ ಮಾಹಿತಿ ಪಡೆದಿದ್ದಾರೆ. ಇದರ ಜೊತೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸುಪ್ರೀಂಕೋರ್ಟ್‍ಗೆ ಅಫಿಡೆವಿಟ್ ಸಲ್ಲಿಸುವ ವೇಳೆ ನ್ಯಾಯಮಂಡಳಿ ತಾತ್ಕಾಲಿಕವಾಗಿ ತಡೆಹಿಡಿಯಬೇಕು. ಸದ್ಯಕ್ಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ.
ಈಗಾಗಲೇ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇನ್ನು ನೀರು ನಿರ್ವಹಣಾ ಮಂಡಳಿ ರಚನೆಗೊಂಡರೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಇದೆ. ಆದ್ದರಿಂದ ಇಂತಹ ಸ್ಥಿತಿಯಲ್ಲಿ ಮಂಡಳಿ ರಚನೆ ಬೇಡ ಎಂದು ಮನವರಿಕೆ ಮಾಡಿಕೊಡಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಅವರ ಸಲಹೆ ಮೇರೆಗೆ ದೆಹಲಿಗೆ ದೌಡಾಯಿಸಿದ್ದು, ಇಂದಿನಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಬಿಜೆಪಿ ಕಾರ್ಯಕಾರಿಣಿಗೆ ಗೈರು ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷದ ಬೆಳವಣಿಗೆಗಿಂತ ರಾಜ್ಯದ ಹಿತಾಸಕ್ತಿ ಮುಖ್ಯ. ಕಾರ್ಯಕಾರಿಣಿಗೆ ನೀವು ಬಾರದಿದ್ದರೂ ಪ್ರಧಾನಿ ಬಳಿ ಖುದ್ದು ತೆರಳಿ ನಿರ್ವಹಣಾ ಮಂಡಳಿ ರಚನೆ ತಡೆಯಲು ಎಲ್ಲಾ ಪ್ರಯತ್ನ ಮಾಡುವಂತೆ ಯಡಿಯೂರಪ್ಪ ಅವರು ಅನಂತ್‍ಕುಮಾರ್‍ಗೆ ಸೂಚನೆ ಕೊಟ್ಟಿರುವುದಾಗಿ ತಿಳಿದುಬಂದಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin