ಪ್ರಧಾನಿ ಮೋದಿ ಕಣ್ಣಾಲಿಗಳು ಒದ್ದೆಯಾದ ಆ ಸಂದರ್ಭ..!

ಈ ಸುದ್ದಿಯನ್ನು ಶೇರ್ ಮಾಡಿ

Modi-cry

ನವದೆಹಲಿ, ಸೆ. 11-ಭಾರತದ ಅಭ್ಯುದಯದ ಬಗ್ಗೆಯೇ ಯಾವಾಗಲೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಹೋದರನ ಮಗಳ ಸಾವಿನ ಅಂತ್ಯ ಸಂಸ್ಕಾರದಲ್ಲೂ ಭಾಗವಹಿಸಲು ಸಾಧ್ಯವಾಗದೇ ಹೋದ ದುರಂತ ಸಂಗತಿಯೊಂದು ಬೆಳಕಿಗೆ ಬಂದಿದೆ.   ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರು ಐತಿಹಾಸಿಕ ವಿಜಯ ದುಂಧುಬಿ ಮೊಳಗಿಸಿದ ಸಂದರ್ಭದಲ್ಲಿ ತೆಗೆಯಲಾದ ಈ ಛಾಯಾಚಿತ್ರವು ಭಾರತೀಯ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯತೆ ಪಡೆದಿದೆ. ಬಹುಶ: ಈ ಚಿತ್ರವನ್ನು ನೋಡದವರು ವಿರಳ. ಭಾರತದ ಅತ್ಯಂತ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿದ ಮೋದಿಗೆ ಅವರ ಮಾತೃಶ್ರೀ ಮಮತೆಯಿಂದ ಸಿಹಿ ತಿನ್ನಿಸುತ್ತಿರುವ ದೃಶ್ಯವಿದು. ಈ ಚಿತ್ರದಲ್ಲಿ ಸಿಹಿ ಇರುವ ತಟ್ಟೆಯನ್ನು ಹಿಡಿದುಕೊಂಡಿರುವ ಹಸÀನ್ಮುಖಿ ಓರ್ವ ಮಹಿಳೆಯನ್ನೂ ಕಾರಣಬಹುದು. ಇವರ ಹೆಸರು ನಿಕುಂಜ್‍ಬೆನ್. ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಅವರ ಮಗಳು. ದುರದೃಷ್ಟದ ಸಂಗತಿ ದೀರ್ಘಕಾಲದ ಎಂದರೆ ಕಳೆದ ವಾರ ಹೃದಯ ಸಮಸ್ಯೆಯಿಂದಾಗಿ ನಿಕುಂಜ್‍ಬೆನ್ ನಿಧನರಾದರು.

ಚೀನಾದಲ್ಲಿ ನಡೆಯುತ್ತಿದ್ದ ಜಿ-20 ಶೃಂಗಸಭೆಯಲ್ಲಿದ್ದಾಗ ಮೋದಿ ಅವರಿಗೆ ನಿಕುಂಬ್‍ಬೆನ್ ಅವರ ಅನಾರೋಗ್ಯ ಪರಿಸ್ಥಿತಿಯ ಸುದ್ದಿ ತಲುಪಿತ್ತು. ಪ್ರಧಾನಿಯವರು ಭಾರತಕ್ಕೆ ಹಿಂದಿರುಗಿದ ನಂತರ ತಮ್ಮ ಸಹೋದರನನ್ನು ಸಂಪರ್ಕಿಸಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಆಕೆ ನಿಧನರಾದ ಸುದ್ದಿಯನ್ನು ಪ್ರಹ್ಲಾದ್ ತಿಳಿಸಿದಾಗ ಮೋದಿ ಅಪಾರ ದುಃಖತಪ್ತರಾದರು. ದೇಶದಲ್ಲಿ ತಾಂಡವಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಬಗ್ಗೆಯೇ ಸದಾ ಕಾರ್ಯೋನ್ಮುಖರಾಗಿರುವ ಮೋದಿ ಅವರಿಗೆ ನಿಕುಂಜ್ ಬೆನ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲೇ ಇಲ್ಲ. ಅಂತ್ಯ ಸಂಸ್ಕಾರದ ನಂತರ ಮತ್ತೆ ಸಹೋದರನನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆದರು. [  ಇದನ್ನೂ ಓದಿ : ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡುವಂತೆ ಮೋದಿಗೆ ಪತ್ರ ಬರೆದ ಬಲೂಚ್ ಮಹಿಳೆ  ]

ಮೋದಿ ಸಂಪುಟ ಸಹೋದ್ಯೋಗಿಗಳಿಗೆ ಮತ್ತು ಅವರ ಅಪ್ತರಿಗೇ ಈ ಘಟನೆ ಬಗ್ಗೆ ತಿಳಿಯಲಿಲ್ಲ. ಆದರೆ ಕಾಶ್ಮೀರದಲ್ಲಿ ತಲೆದೋರಿರುವ ಅಶಾಂತಿ ಸ್ಥಿತಿ ಕುರಿತ ಸಭೆ ವೇಳೆ ಅನೇಕರು ಮೋದಿ ಅವರ ಕಣ್ಣಾಲಿಗಳು ಒದ್ದೆಯಾಗಿರುವುದನ್ನು ಗಮನಿಸಿದರು. ಈ ಬಗ್ಗೆ ಪ್ರಧಾನಿಯವರನ್ನು ಕೇಳಿದಾಗ ನಿಜ ಸಂಗತಿ ತಿಳಿಯಿತು.  ವಾಸ್ತವ ಸಂಗತಿ ಎಂದರೆ ನಿಕುಂಜ್‍ಬೆನ್ ಮತ್ತು ಅವರ ಕುಟುಂಬ ಆರ್ಥಿಕವಾಗಿ ಸ್ಥಿತಿವಂತರಲ್ಲ. ಒಂದು ಪುಟ್ಟ ಮನೆಯಲ್ಲಿ ಬಾಡಿಗೆಯಲ್ಲಿದ್ದಾರೆ. ಅವರ ಪತಿ ಖಾಸಗಿ ಕಂಪನಿಯೊಂದರಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ನೆರವಾಗಲು ನಿಕುಂಜ್‍ಬೆನ್ ಟೈಲರಿಂಗ್ ವೃತ್ತಿ ಮಾಡುತ್ತಾ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ದೇಶದ ಪ್ರಧಾನಿಯೇ ತನ್ನ ದೊಡ್ಡಪ್ಪನಾದರೂ ಸ್ವಾಭಿಮಾನಿ ನಿಕುಂಜ್ ಒಮ್ಮೆಯಾದರೂ ನೆರವಿಗಾಗಿ ಮೋದಿಯನ್ನರನ್ನಾಗಲಿ ಅಥವಾ ಸರ್ಕಾರದಿಂದಾಗಲಿ ನೆರವಿಗೆ ಕೈಚಾಚಲಿಲ್ಲ. ಮಿಗಿಲಾಗಿ ನನ್ನ ದೊಡ್ಡಪ್ಪ ಪ್ರಧಾನಿ ಎಂದೂ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.

ಸರ್ಕಾರದ ಉನ್ನತ ಹುದ್ದೆಯಲ್ಲಿ ತಮ್ಮವರು ಅಥವಾ ಜನಪ್ರತಿನಿಧಿಗಳಾದರೆ ಅವರಿಂದ ಸಾಧ್ಯವಾದಷ್ಟೂ ಅನುಕೂಲ ಮತ್ತು ಪ್ರಯೋಜನಗಳನ್ನು ಗಿಟ್ಟಿಸಲು ಮತ್ತು ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಹವಣಿಸುವ ಮಂದಿಯೇ ತುಂಬಿ ತುಳುಕುತ್ತಿರುವ ಈ ಸಮಾಜದಲ್ಲಿ ಮೋದಿಯ ರಕ್ತಸಂಬಂಧಿಗಳ ನಿಸ್ವಾರ್ಥ ಗುಣವು ತುಂಬಾ ವಿಭಿನ್ನವಾದುದು.  ಪ್ರಧಾನಿ ತನ್ನ ದೊಡ್ಡಪ್ಪ ಎಂದಾಗಲಿ ಅಥವಾ ಅವರಿಂದ ನೆರವಿಗೆ ಕೈಚಾಚುವುದಾಗಲಿ ಮಾಡದ ಈ ಕುಟುಂಬವು ಇಡೀ ಭಾರತಕ್ಕೆ ಮಾದರಿಯಾದರೇ, ತನ್ನ ಮಗಳ ಸಾವಿನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಒಂದು ದಿನ ಬಿಡವು ಮಾಡಿಕೊಳ್ಳದೇ ದೇಶದ ಒಳಿತಿಗಾಗಿ ಕಾರ್ಯೋನ್ಮುಖರಾದ ಮೋದಿ ಇಡೀ ಜಗತ್ತಿಗೇ ಆದರ್ಶವಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin